“ಮದಿಪು” ತ್ರೈಮಾಸಿಕ ಪತ್ರಿಕೆಗೆ ಕವಿತೆ, ಲೇಖನ, ಅಂಕಣ ಆಹ್ವಾನ

ಮಡಿಕೇರಿ ಮಾ.೨೩ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ “ಮದಿಪು” ತ್ರೈ ಮಾಸಿಕ ಪತ್ರಿಕೆಯಲ್ಲಿ ತುಳು ಕವಿತೆ, ಲೇಖನ, ಅಂಕಣ ಸೇರಿದಂತೆ ಹನಿಕವಿತೆಗಳನ್ನು ಪ್ರಕಟಿಸಲು ಆಸಕ್ತ ಬರಹಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಕಾಡೆಮಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು ಬರಹಗಾರರಿದ್ದು, ಇವರಿಗೆ ಸೂಕ್ತ ವೇದಿಕೆ ಕಲ್ಪಿಸಲು ತುಳು ಸಾಹಿತ್ಯ ಅಕಾಡೆಮಿ ಮುಂದಾಗಿದೆ. ಜಿಲ್ಲೆಯ ಆಸಕ್ತ ಬರಹಗಾರರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ತುಳು ಕವಿತೆ, ಲೇಖನ, ಅಂಕಣ, ಹನಿಕವಿತೆಯನ್ನು ತುಳು ಭಾಷೆಯಲ್ಲಿ ಸ್ಪಷ್ಟವಾಗಿ ಬರೆದಿರಬೇಕು. ಬರಹಗಾರರ ಹೆಸರು, ಭಾವಚಿತ್ರ ಹಾಗೂ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಉರ್ವ ಸ್ಟೋರ್, ಅಶೋಕ ನಗರ ಅಂಚೆ, ತುಳು ಭವನ, ಮಂಗಳೂರು-೫೭೫೦೦೬ ಅಥವಾ ಪಿ.ಎಂ.ರವಿ, ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶಿವಶಕ್ತಿ ಕಾಂಪ್ಲೆಕ್ಸ್, ಮ್ಯಾನ್ಸ್ ಕಾಂಪೌAಡ್ (ಜನರಲ್ ತಿಮ್ಮಯ್ಯ ಕ್ರೀಡಾಂಗಣ) ಜೂನಿಯರ್ ಕಾಲೇಜು ರಸ್ತೆ, ಮಡಿಕೇರಿ ಇಲ್ಲಿಗೆ ಏ.೪ ರ ಒಳಗೆ ತಲುಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೯೭೨೦ ೭೩೨೯೫ ಸಂಪರ್ಕಿಸಬಹುದಾಗಿದೆ.

error: Content is protected !!