ಮತ್ತೆ ದುಬಾರಿಯಾಯ್ತು ಮರಳು, ಇಟ್ಟಿಗೆ, ಸಿಮೆಂಟ್, ಸ್ಟೀಲ್ ದರಗಳು!

ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ತೈಲ ದರ ಹೆಚ್ಚಾಗಿದೆ. ಇದರೊಂದಿಗೆ ಕಚ್ಚಾವಸ್ತು ಕೊರತೆಯ ಪರಿಣಾಮ ಸ್ಟೀಲ್ ಮತ್ತು ಸಿಮೆಂಟ್ ದರವೂ ಬಲು ದುಬಾರಿಯಾಗಿದೆ.

ಸಿಮೆಂಟ್, ಸ್ಟೀಲ್ ಇತರೆ ಕಟ್ಟಡ ಸಾಮಗ್ರಿಗಳ ದರ ಹೆಚ್ಚಾಗಿದ್ದು, ಮನೆ ನಿರ್ಮಿಸುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇಟ್ಟಿಗೆ, ಮರಳು, ಸ್ಟೀಲ್, ಜಲ್ಲಿ, ಎಂ ಸ್ಯಾಂಡ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಮಾತ್ರವಲ್ಲ, ಬಿಲ್ಡರ್ ಗಳು, ಗುತ್ತಿಗೆದಾರರು ಕೂಡ ಬೆಲೆಏರಿಕೆಯಿಂದ ಕಂಗಾಲಾಗಿದ್ದಾರೆ.

ಸ್ಟೀಲ್ ದರ ಒಂದು ಟನ್ ಗೆ 12 ಸಾವಿರ ರೂನಿಂದ 22 ಸಾವಿರ ರೂಪಾಯಿಯಷ್ಟು ಹೆಚ್ಚಾಗಿದೆ. 42 -44 ಸಾವಿರ ರೂ. ಇದ್ದ ಸ್ಟೀಲ್ ದರ ಈಗ 64 ಸಾವಿರ ರೂ.ವರೆಗೂ ಹೆಚ್ಚಳವಾಗಿದ್ದು, ನಿರ್ಮಾಣ ಕ್ಷೇತ್ರಕ್ಕೆ ಶಾಕ್ ನೀಡಿದೆ. ಕಟ್ಟಡ ನಿರ್ಮಾಣ ಸಾಮಗ್ರಿ ದರ ಬಾರಿ ಏರಿಕೆಯಾಗಿರುವುದರಿಂದ ನಿರ್ಮಾಣ ಕಾರ್ಯಗಳಿಗೆ ತೊಂದರೆ ಎದುರಾಗಿದೆ ಎಂದು ಹೇಳಲಾಗಿದೆ.

error: Content is protected !!