ಮತ್ತೆ ಜಯಭೇರಿ ಬಾರಿಸಿದ ದಿದಿ!

ನವದೆಹಲಿ, ಮೇ 2- ಬಿಜೆಪಿಯ ರಣರೋಚಕ ಪ್ರತಿರೋಧದ ನಡುವೆಯೂ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸತತವಾಗಿ ಮೂರನೇ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದಿದೆ. ಇಂದು ನಡೆದ ಮತ ಎಣಿಕೆ ನಡೆದ ವೇಳೆ ಮಮತಾ ದಿದಿ ಅವರ ತೃಣಮೂಲ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕ 292 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸರ್ಕಾರ ರಚಿಸಲು 147 ಸಂಖ್ಯಾಬಲ ಬೇಕಿತ್ತು. ಆದರೆ ಮ್ಯಾಜಿಕ್ ನಂಬರ್ ದಾಟಿದ ಟಿಎಂಸಿ194 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ.

ಪ್ರಬಲಪೈಪೋಟಿ ನೀಡಿದ ಬಿಜೆಪಿ ತನ್ನ ಸಂಖ್ಯೆಯನ್ನು 93ಕ್ಕೆ ಹೆಚ್ಚಿಸಿಕೊಂಡಿದೆ. ಪಕ್ಷೇತರರು ಐದು ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

ಆರಂಭದಲ್ಲಿ ಸುಮೇಂದು ಅಧಿಕಾರಿ ಮುನ್ನೆಡೆ ಸಾಧಿಸಿದರೆ, ಕೊನೆಯ ಹಂತದಲ್ಲಿ ಮಮತಾ ಬ್ಯಾನರ್ಜಿ ಅಂತರವನ್ನು ಕಡಿಮೆ ಮಾಡಿದರು. ಕೊನೆ ಕ್ಷಣದವರೆಗೂ ಈ ಜಿದ್ದಾಜಿದ್ದಿ ಮುಂದುವರೆದಿತ್ತು. ಪಶ್ಚಿಮ ಬಂಗಾಳದಲ್ಲಿ ಎರಡು ಬಾರಿ ಆಡಳಿತ ನಡೆಸಿದ್ದ ಮಮತಾ ದಿದಿ ವಿರುದ್ಧ ಈ ಬಾರಿ ಆಡಳಿತ ವಿರೋಧಿ ಅಲೆ ಇದೆ ಎಂದು ಬಿಂಬಿಸಲಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಪಶ್ಚಿಮ ಬಂಗಾಳದ ಜನ ಮಮತಾ ಅವರಿಗೆ ಭಾರೀ ಬೆಂಬಲ ವ್ಯಕ್ತ ಪಡಿಸಿದ್ದರು.

ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಿ ಮೋದಿ ಅವರಿಗೆ ಪದೇ ಪದೇ ಮುಜುಗರ ಉಂಟು ಮಾಡುತ್ತಿದ್ದ ಮಮತಾ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದನ್ನು ಬಿಜೆಪಿ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು.

ಎಂಟು ಹಂತಗಳಲ್ಲಿ ನಡೆದಿದ್ದ ಪಶ್ಚಿಮ ಬಂಗಾಳದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹದಿನೆಂಟು ಬಾರಿ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ರ್ಯಾಲಿಗಳನ್ನು ನಡೆದಿದ್ದರು. ಕೇಂದ್ರ ಗೃಹ ಸಚಿವರ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಯುವ ಅಧ್ಯಕ್ಷ ತೇಜೆಸ್ವಿ ಸೂರ್ಯ ಸೇರಿದಂತೆ ಘಟಾನುಘಟಿ ನಾಯಕರು ನಿರಂತರವಾಗಿ ಪ್ರವಾಸ ಮಾಡಿ ಪ್ರಚಾರ ನಡೆಸಿದ್ದರು.

ಜನತಾ ಸಂಘಟ ಸಂಸ್ಥಾಪಕರ ತವರೂರಾದ ಪಶ್ಚಿಮ ಬಂಗಾಳದಲ್ಲಿ ಮಮತಾ ದಿದಿಯನ್ನು ಮಣಿಸಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕು ಎಂದು ಟಿಎಂಸಿ ಸರ್ಕಾರದಲ್ಲಿ ಸಚಿವರಾಗಿದ್ದ ಸುಮೇಂಧು ಅಧಿಕಾರಿ ಸೇರಿದಂತೆ ಅನೇಕರ ನಾಯಕರನ್ನು ಬಿಜೆಪಿ ಸೆಳೆದುಕೊಂಡಿತ್ತು.

error: Content is protected !!