fbpx

ಮತ್ತಿಗೋಡಿನಲ್ಲಿ ನಟ ಧನ್ವೀರ್ ಗೌಡ ಕಾನೂನು ಉಲ್ಲಂಘನೆ.

ಗಿರಿಧರ್ ಕೊಂಪುಳೀರಾ

ಸುದ್ದಿ ಸಂತೆ Exclusive Report

ಕೊಡಗು(ಮತ್ತಿಗೋಡು): ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಅವಧಿ ಮೀರಿ ರಾತ್ರಿ ಸಫಾರಿ ನಡೆಸಿ ವಿವಾಧಕ್ಕೆ ಸಿಲುಕಿರುವ, ಇದೀಗಷ್ಟೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ “ಬಜಾರ್” ಚಿತ್ರ ಮುಗಿಸಿರುವ ಬೆಂಗಳೂರು ಮೂಲದ ಧನ್ವೀರ್ ಗೌಡ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.


ವಿರಾಜಪೇಟೆ ಸಮೀಪದ ತಿತಿಮತಿಯ ಮತ್ತಿಗೋಡಿನ ಸಾಕಾನೆ ಶಿಬಿರಕ್ಕೆ ಅತಿಕ್ರಮ ಪ್ರವೇಶ ಮಾಡಿ ಸಾಕಾನೆ ಮಹೇಂದ್ರ ಮೇಲೆ ಏರಿ ಸ್ನೇಹಿತರೊಂದಿಗೆ ಸವಾರಿ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಬೆನ್ನಲ್ಲೇ ಹುಣಸೂರು ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳು ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರ ಸಂಬಂಧ ಧನ್ವೀರ್ ಗೌಡ,ವಿಶ್ವಾಸ್ ಅಯ್ಯರ್,ದರ್ಶನ್ ಎಂಬುವವರು ಸೇರಿದಂತೆ 6 ಮಂದಿ ಮೇಲೆ ದೂರು ದಾಖಲಾಗಿದ್ದು,ಹಿರಿಯ ಅಧಿಕಾರಿಗಳ ಅನುಮತಿಯನ್ನೂ ಪಡೆಯದೆ ಸಹಕರಿಸಿದ ಸಿಬ್ಬಂದಿಗಳಿಗೂ ನೋಟಿಸ್ ನೀಡಲಾಗಿದೆ.

error: Content is protected !!