ಮಡಿಕೇರಿ ನಗರ ಸಭೆಯಿಂದ ಫಾರಂ ನಂ.3 ಸಿಗಲು ಜನರ ಪರದಾಟ. ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಪ್ರತಿಭಟನೆಯ ಎಚ್ಚರಿಕೆ.

ನಗರ ಸಭೆಯಲ್ಲಿ ಯಾವ ಕಡತಗಳು ಕೂಡ ವಿಲೇವಾರಿಯಾಗದೆ ಜನ ತೀವ್ರ ರೀತಿಯಲ್ಲಿ ಪರದಾಡುವಂತಾಗಿದೆ. ಕಳೆದ ಮೂರು ವರ್ಷದಿಂದ ಫಾರಂ ನಂಬರ್ 3 ಸಿಗದೆ ಜನರು ಬೇಸತ್ತಿದ್ದಾರೆ. ಒಂದರಿಂದ ಒಂದೂವರೆ ತಿಂಗಳಿನಲ್ಲಿ ಸಿಗಬೇಕಿದ್ದ ಫಾಮ್೯ ನಂಬರ್ 3 ಒಂದು ವರ್ಷ ಕಳೆದರೂ ಸಿಗದೆ ನಿರ್ಲಕ್ಷ್ಯ ಧೋರಣೆಯನ್ನು ನಗರ ಸಭೆಯ ಸಿಬ್ಬಂದಿಗಳು ಅನುಸರಿಸುತ್ತಿದ್ದಾರೆ. ಈ ರೀತಿಯ ಅವ್ಯವಸ್ಥೆಯ ಪರಿಸ್ಥತಿಯಿಂದಾಗಿ ಹೈರಾಣಾಗಿರುವ ಜನ ಈ ಕುರಿತು ಪ್ರಶ್ನಿಸಿದರೆ, ನೆಪಗಳನ್ನು ಹೇಳುವ ಸಿಬ್ಬಂದಿಗಳು ಬೇಜವಾಬ್ದಾರಿಯ ಪರಮಾವಧಿಯನ್ನು ಮೆರೆಯುತ್ತಿದ್ದಾರೆ. ಇವರ ಡೋಂಟ್ ಕೇರ್ ಸ್ವಭಾವಕ್ಕೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ. ಈ ಬಗ್ಗೆ ಜನ ಸಾಮಾನ್ಯರ ಪರವಾಗಿ ಕೇಳ್ಕೊಳ್ಳೋದು ಇಷ್ಟೆ ಫಾರಂ ನಂಬರ್ 3 ಕೊಡಲು ನಗರ ಸಭೆ ಯಾಕೆ ಮೀನಾಮೇಷ ಎಣಿಸುತ್ತಿದೆ…? ಸಿಬ್ಬಂದಿ ವರ್ಗದವರು ಅವರ ಕರ್ತವ್ಯವನ್ನು ಏಕೆ ಸರಿಯಾಗಿ ನಿರ್ವಹಿಸುತ್ತಿಲ್ಲ?
ಪರಿಸ್ಥಿತಿ ಹೀಗೆ ಮುಂದುವರೆದರೆ ನಗರ ಸಭೆ ಇನ್ನು ಮುಂದೆಯೂ ಎಚ್ಚೆತ್ತುಕೊಳ್ಳದಿದ್ದರೆ ದಲಿತ ಸಂಘರ್ಷ ಸಮಿತಿಯು ನಗರ ಸಭೆ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡಲಿದೆ ಎಂದು ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.