fbpx

ಮಡಿಕೇರಿ ನಗರಸಭೆ ವ್ಯಾಪ್ತಿಯ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ

ಮಡಿಕೇರಿಯಲ್ಲಿ ನಿತ್ಯ 23 ಟನ್ ತ್ಯಾಜ್ಯ ಸಂಗ್ರಹ

ಕೊಡಗು ಜಿಲ್ಲೆಯ ಮಡಿಕೇರಿ ನಗರ ಸಭೆಯ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ತ್ಯಾಜ್ಯದ ಪ್ರಮಾಣವೆಷ್ಟು? ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆಯೇ, ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರನ್ನು ವಿಧಾನ ಪರಿಷತ್ನಲ್ಲಿ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರು ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 23 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪ್ರವಾಸಿಗರು ನಗರಕ್ಕೆ ಹೆಚ್ಚು ಆಗಮಿಸುವ ಕಾಲದಲ್ಲಿ ತ್ಯಾಜ್ಯ ಉತ್ಪಾದನೆಯ ಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಿರುವ ಸಾಧ್ಯತೆಗಳಿರುತ್ತದೆ ಎಂದಿದ್ದು,
ಹಾಲಿ ನಗರ ವ್ಯಾಪ್ತಿಯಲ್ಲಿ ಪ್ರತಿದಿನ 23 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಮಡಿಕೇರಿಯ ಕರ್ಣಂಗೇರಿ ಗ್ರಾಮದ ಸವೇ೯ ನಂ.471/ಐಪಿ16 ರಲ್ಲಿ 6 ಎಕರೆ ಸಂಸ್ಕರಣೆ ಜಾಗದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದಿರುವ ಅಧಿಕೃತ ಪತ್ರವನ್ನು ಅನುಸರಿಸಿ ತ್ಯಾಜ್ಯ ವಿಲೇವಾರಿಯನ್ನು ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು.

ಈ ಜಾಗದಲ್ಲಿ ಈಗಾಗಲೇ ವಾಚ್ಮೆನ್ ಶೆಡ್, ಎಲೆಕ್ಟ್ರಿಸಿಟಿ ಕನೆಕ್ಸನ್, ಬೋರ್ ವೆಲ್, 8 ಕಾಂಪೋಸ್ಟ್ ಪಿಟ್ಸ್ ಥರ್ಮಲ್ ಸ್ಕ್ರೀನ್ ಮತ್ತಿತರ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ. ಹಾಲಿ ಲಭ್ಯವಿರುವ 8 ಕಂಪೋಸ್ಟ್ ಪಿಟ್ಸ್ಗಳಲ್ಲಿ ಹಸಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಸ್ಕರಣೆ ಮಾಡುವ ಸಲುವಾಗಿ ಏರಿಯೇಷನ್ ಹಾಗೂ ಲೀಚೆಟ್ ಕಲೆಕ್ಷನ್ ಸಿಸ್ಟಮ್ ಅಭಿವೃದ್ಧಿ ಪಡಿಸುವ ಕಾಮಗಾರಿಗಳು ಚಾಲನೆಯಲ್ಲಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ವಿಕೇಂದ್ರೀಕೃತ ಸಂಸ್ಕರಣೆ ಮಾಡಲು ನಗರಸಭಾ ವ್ಯಾಪ್ತಿಯಲ್ಲಿ ಕೆಲವೊಂದು ಸ್ಥಳಗಳನ್ನು ಗುರುತಿಸಲಾಗಿದ್ದು, ವಿವರ ಇಂತಿದೆ. ದಾಸವಾಳ ರಸ್ತೆ. ಪಿ.ಐ.ಡಿ. ನಂ.04-1-504-37, ವಿಸ್ತೀರ್ಣ 125110 ಚದರ ಅಡಿಗಳು. ಹೆಲ್ತ್ ಕಚೇರಿ ಹತ್ತಿರ :ಪಿ.ಐ.ಡಿ. ನಂ.14-3-519-7, ವಿಸ್ತೀರ್ಣ 6040 ಚದರ ಅಡಿಗಳು.
ಈ ಸ್ಥಳಗಳಲ್ಲಿ ಸುಮಾರು 6 ಟನ್ಗಳಷ್ಟು ಒಣ ತ್ಯಾಜ್ಯವನ್ನು ಸಂಸ್ಕರಿಸಲು 2 ಶೆಡ್ಗಳನ್ನು ರೂ. 30 ಲಕ್ಷಗಳ ಅಂದಾಜಿನಲ್ಲಿ ನಿಮಾ೯ಣ ಮಾಡಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ. ಈ ಘಟಕಗಳಲ್ಲಿ ಬೇಲಿಂಗ್ ಯಂತ್ರ ಹಾಗೂ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಒಣತ್ಯಾಜ್ಯ ಸಂಸ್ಕರಣೆ ಮಾಡಲು ಉದ್ದೇಶಿಸಲಾಗಿದೆ.
ತ್ಯಾಜ್ಯವನ್ನು ವಿಕೇಂದ್ರಿತವಾಗಿ ಸಂಸ್ಕರಣೆ ಮಾಡುವ ಉದ್ದೇಶದಿಂದ ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಲು ಸಾರ್ವಜನಿಕರಲ್ಲಿ ಹೋಂ ಕಾಂಪೋಸ್ಟಿಂಗ್, ಸಮುದಾಯ ಕಾಂಪೋಸ್ಟಿಂಗ್ನ್ನು ಅಳವಡಿಸಿಕೊಳ್ಳುವಂತೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
8 ರಿಂದ 10 ಟನ್ ಹಸಿ ತ್ಯಾಜ್ಯವನ್ನು ಕಂಪೋಸ್ಟ್ ಪಿಟ್ಸ್ಗಳಲ್ಲಿ ಕೊಳೆಸಿ ಗೊಬ್ಬರವಾಗಿ ಪರಿವತಿ೯ಸಲು ಕ್ರಮವಹಿಸಲಾಗುತ್ತಿದೆ. 10 ರಿಂದ 13 ಟನ್ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಪೇಲ್ ಮಾಡಿ ಹತ್ತಿರದ ಪುನರ್ಬಳಕೆದಾರರಿಗೆ ನೀಡಲು ಕ್ರಮವಹಿಸಲಾಗಿದೆ.
ಪೌರಕಾಮಿ೯ಕರಿಗೆ ಹಾಗೂ ಸಾರ್ವಜನಿಕರಿಗೆ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಣೆ ಮಾಡುವ ಕುರಿತಾಗಿ ತರಬೇತಿ ನೀಡಲಾಗಿದೆ. ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು 2016, ರೀತ್ಯಾ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇವಾರಿ ಮಾಡಲು ಎಲ್ಲಾ ಅಗತ್ಯ ಕ್ರಮವಹಿಸಲಾಗುತ್ತಿದೆ.

ಮಡಿಕೇರಿ ನಗರ ಸಭೆಗೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿವಿಧ ಯೋಜನೆಗಳ ಮೂಲಕ ಕಳೆದ ಮೂರು ವರ್ಷಗಳಿಂದ ಬಂದಿರುವ ಅನುದಾನವೆಷ್ಟು? ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಶಾಶ್ವತ ಯೋಜನೆ ಇದುವರೆಗೂ ಅನುಷ್ಠಾನಗೊಳ್ಳದಿರಲು ಕಾರಣಗಳೇನು ಎಂದು ವೀಣಾ ಅಚ್ಚಯ್ಯರವರ ಪ್ರಶ್ನೆಗೆ ಉತ್ತರಿಸಿದ ಸಚಿವರಾದ ಡಾ.ನಾರಾಯಣಗೌಡ ಅವರು ಮಡಿಕೇರಿ ನಗರಸಭೆಗೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವಿವಿಧ ಯೋಜನೆಗಳ ಮೂಲಕ ಕಳೆದ ಮೂರು ವರ್ಷಗಳಿಂದ ಬಂದಿರುವ ಅನುದಾನದ ವಿವರ.
2020-21ನೇ ಸಾಲಿನಲ್ಲಿ ಐಇಸಿ ಚಟುವಟಿಕೆಗಾಗಿ ರೂ. 10 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2020-21 ನೇ ಸಾಲಿನಲ್ಲಿ 15 ನೇ ಜನರಲ್ ಬೇಸಿಕ್ ಗ್ರ್ಯಾಂಟ್ ಅಡಿ ರೂ.50.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ 14ನೇ ಜನರಲ್ ಬೇಸಿಕ್ ಗ್ರಾಂಟ್ ಅಡಿ ರೂ.41.80 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2018-19ನೇ ಸಾಲಿನಲ್ಲಿ 15 ನೇ ಜನರಲ್ ಬೇಸಿಕ್ ಗ್ರಾಂಟ್ ಅಡಿ ರೂ.31.40 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಎಸ್ಬಿಎಂ. ಯೋಜನೆಯಡಿ ರೂ.98.05 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ

2017 ಸಾಲಿನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ತ್ಯಾಜ್ಯ ಸಂಗ್ರಹಣೆ ಅಗತ್ಯವಿರುವ ವಾಹನಗಳ ಹಾಗೂ ತ್ಯಾಜ್ಯ ಸಂಸ್ಕರಣೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ರೂ.561.11 ಲಕ್ಷಗಳ ಬಂಡವಾಳ ಮೊತ್ತದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಸಕಾ೯ರವು ಅನುಮೋದನೆ ನೀಡಿದೆ. ರೂ.98.05 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ.

ತ್ಯಾಜ್ಯ ಸಂಸ್ಕರಣೆ ಜಾಗದಲ್ಲಿ ಹಳೆಯ ತ್ಯಾಜ್ಯದ ರಾಶಿಯಿರುವುದರಿಂದ ಸಿವಿಲ್ ಕಾಮಗಾರಿಗಳನ್ನು ಸದರಿ ಸ್ಥಳದಲ್ಲಿ ಕೈಗೊಳ್ಳಲು ಕಷ್ಟಸಾಧ್ಯವಾಗಿರುತ್ತದೆ. ಆದುದರಿಂದ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಎಕ್ಸ್ಪ್ರೆಷನ್ ಆಫ್ ಇಂಟರೆಷ್ಟ್ ಅನ್ನು ದಿನಾಂಕ -27-11-2020 ರಂದು ಆಹ್ವಾನಿಸಲಾಗಿದೆ.

ಘನತ್ಯಾಜ್ಯ ವಿಲೇವಾರಿ ಕುರಿತು ಮಾನ್ಯ ಉಚ್ಚ ನ್ಯಾಯಲಯ, ಬೆಂಗಳೂರಿನಲ್ಲಿ ರಿಟ್ ಅಜಿ೯ ಸಂಖ್ಯೆ -48/2020 ಎಸ್.ಆರ್.ವಿ.ಕೆ. ವೆಲ್ ಫೇರ್ ಅಸೋಸಿಯೇಷನ್, ಕೊಡಗು/ ಕನರ್ಾಟಕ ಸಕರ್ಾರ ಮತ್ತು ಇತರರ ವಿರುದ್ದ ಪ್ರಕರಣ ದಾಖಲಾಗಿದ್ದು, ಪ್ರಕರಣವು ವಿಚಾರಣೆ ಹಂತದಲ್ಲಿರುತ್ತದೆ.

ಮಡಿಕೇರಿ ನಗರಸಭೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ತಾಂತ್ರಿಕ ಸಲಹೆ, ಅಭಿಪ್ರಾಯ ನೀಡಲು ಪೌರಾಡಳಿತ ನಿದರ್ೇಶನಾಲಯದಿಂದ M/S SAAHAS ಏಜೆನ್ಸಿಯನ್ನು ನಿಯೋಜಿಸಿದೆ. ಈ ಏಜೆನ್ಸಿ ನೀಡಿರುವ ವರದಿಯ ರೀತ್ಯಾ ಮಡಿಕೇರಿ ನಗರವು Ecologically sensitive zone ವಲಯದಲ್ಲಿದ್ದು, ಪ್ರಸ್ತುತ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಸ್ಯಾನಿಟರಿ ನೆಲಭತಿ೯ ಜಾಗವು ಎತ್ತರದ ಪ್ರದೇಶದಲ್ಲಿದೆ. ಘನತ್ಯಾಜ್ಯ ನಿರ್ವಹಣೆ ನಿಯಮಗಳು 2016 ರೀತ್ಯಾ ಸೂಕ್ತದಲ್ಲಿರುವುದರಿಂದ ಪಯರ್ಾಯ ಜಾಗ ಗುರುತಿಸಿ ವೈಜ್ಞಾನಿಕವಾಗಿ ಅಭಿವೃದ್ದಿಪಡಿಸಲು ತಿಳಿಸಲಾಗಿದೆ.

ನಗರದಲ್ಲಿ ಸೂಕ್ತ ಪ್ರದೇಶವನ್ನು ಗುರುತಿಸಿ, ಪ್ರಸ್ತಾವನೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ನಗರಸಭೆಗೆ ಸೂಚನೆ ನೀಡಲಾಗಿದೆ. ನಗರ ಸಭೆಯು ಬದಲಿ ಸ್ಥಳವನ್ನು ಗುರುತಿಸಿ, ಈ ಸ್ಥಳಕ್ಕೆ ಅನುಗುಣವಾಗಿ ಪರಿಷೃತ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

error: Content is protected !!