ಮಡಿಕೇರಿ ನಗರದಲ್ಲಿ ತಡ ರಾತ್ರಿ ಕೇಳಿ ಬಂದ ಗುಂಡಿನ ಸದ್ದು: ನಗರ ಠಾಣೆಯಲ್ಲಿ ದೂರು ದಾಖಲು

ವರದಿ ಕೃಪೆ: ಕೂಗ್೯ ಎಕ್ಸ್ ಪ್ರೆಸ್
ಭಾನುವಾರ ತಡರಾತ್ರಿ ಮಡಿಕೇರಿನಗರದ ಗೌಳಿ ಬೀದಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ವ್ಯಕ್ತಿಯೊಬ್ಬನ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ನಿವಾಸಿ ಪ್ರಮೋದ್ ಎಂಬುವವರ ಮನೆಯ ಬಳಿ ಗಾಳಿಬೀಡು ಗ್ರಾಮದ ತೀರ್ಥ ಮತ್ತು ಕೆಲವು ಯುವಕರ ಗುಂಪು ವಾಹನದಲ್ಲಿ ಆಗಮಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಯಾವುದೋ ಕಾರಣಕ್ಕೆ ಪ್ರಮೋದ್ ಕುಟುಂಬಕ್ಕೆ ತೀರ್ಥನಿಂದ ಜೀವ ಬೆದರಿಕೆ ಇದ್ದ ಕಾರಣ ರಕ್ಷಣೆ ಕೋರಿ ಈ ಮೊದಲೇ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ಕಳೆದ ರಾತ್ರಿ ಈ ಘಟನೆ ಸಂದರ್ಭ ಪ್ರಮೋದ್ ಮನೆಯಲ್ಲಿರಲಿಲ್ಲ ಎನ್ನಲಾಗಿದ್ದು, ಸ್ವತಃ ಮನೆಯವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.