ಮಡಿಕೇರಿ ತಾಲೂಕು ಗ್ರಾಮಂತರ ಯುವ ಮೋರ್ಚಾದ ವತಿಯಿಂದ ಡ್ರಗ್ಸ್ ಮುಕ್ತ ಭಾರತ ಅಭಿಯಾನ

ಭಾರತೀಯ ಜನತಾ ಪಾರ್ಟಿ ಮಡಿಕೇರಿ ತಾಲೂಕು ಗ್ರಾಮಾಂತರ ಯುವ ಮೋರ್ಚದ ವತಿಯಿಂದ ವ್ಯಸನ ಮುಕ್ತ – ಸ್ವಚ್ಛ ಪರಿಸರಯುಕ್ತ ಸಮಾಜ ನಿರ್ಮಾಣಕ್ಕಾಗಿ ಡ್ರಗ್ಸ್ ಮುಕ್ತ ಭಾರತ ಕಾರ್ಯಕ್ರಮ ಪೆರಾಜೆ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಹೇಮಂತ್ ತೋರೆರರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಈಗಿನ ಯುವ ಪೀಳಿಗೆ ಹಾಗು ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಮಾದಕ ವ್ಯಸನಕ್ಕೆ ಬಲಿಯಾಗುವುದರ ಕುರಿತು ವಿವರವಾಗಿ ಮಾತನಾಡಿ ಮುಂದಿನ ದಿನಗಳಲ್ಲಿ ಬಿಜೆಪಿ ಮಡಿಕೇರಿ ಯುವ ಮೋರ್ಚಾದ ವತಿಯಿಂದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರಿಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗು ಮನೆ ಮನೆಗೆ ಕರ ಪತ್ರ ಹಂಚಿ ಜಾಗೃತಿ ಮೂಡಿಸಿ ಡ್ರಗ್ಸ್ ಮುಕ್ತ ಭಾರತ ಮಾಡಲು ಪಣತೊಡುತ್ತೆವೆ ಎಂದು ತಿಳಿಸಿದರು. ನಂತರ ಡ್ರಗ್ಸ್ ಬಗ್ಗೆ ಹಾಗು ಅದರಿಂದಾಗಿ ಅಗುವ ಅನಾಹುತ, ಮಾನಸಿಕ ಸಮಸ್ಯೆಗಳ ಬಗ್ಗೆ ಕೆವಿಜಿ ಮೆಡಿಕಲ್ ಕಾಲೆಜಿನ ಮನೋವೈದ್ಯ ಶಾಸ್ತ್ರ ವಿಭಾಗದ ಪ್ರಾದ್ಯಾಪಾಕರಾದ ಡಾ. ಪೂನಂ ಮೊಂಟಡ್ಕ ರವರು ವಿಸ್ತಾರವಾಗಿ ಮಾತನಾಡಿದರು ಜೊತೆಗೆ ಸರ್ವಾಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಜೊತೆಗೆ ಇಂತಹ ಮಾದಕ ಲೋಕದಿಂದ ಹೇಗೆ ಹೊರಬರಬಹುದು ಮತ್ತು ಮಾದಕ ವ್ಯಸನಿಗಳನ್ನು ಗುಣ ಮುಖರಾಗಲು ಇರುವ ವೈದ್ಯಕೀಯ ಸೇವೆಗಳ ಕುರಿತು ತಿಳಿಸಿದರು. ತದನಂತರ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ದರ್ಶನ್ ಜೊಯಪ್ಪನವರು ಭಾರತದ ಯುವ ಜನರ ಮೇಲೆ ಹೇಗೆ ಈ ಡ್ರಗ್ಸ್ ಪ್ರಭಾವ ಬೀರಿದೆ ಮತ್ತು ಬಿಜೆಪಿ ಸರ್ಕಾರವು ಡ್ರಗ್ಸ್ ವಿರುದ್ದ ಸಮರ ಸಾರಿದೆ ಮುಂದಿನ ದಿನಗಳ ಡ್ರಗ್ಸ್ ಬಗ್ಗೆ ನಮ್ಮ ಸರಕಾರದ ನಡೆಯ ಬಗ್ಗೆ ವಿವರಿಸಿದರು. ಅನಂತರ ಪೆರಾಜೆ ಗ್ರಾಮದ ಹಿರಿಯರು ಜಿಲ್ಲಾ ಕೃಷಿ ಮೋರ್ಚಾದ ಅಧ್ಯಕ್ಷರು ತಾಲೂಕು ಪಂಚಾಯತಿ ಸದಸ್ಯರಾದ ನಾಗೇಶ್ ಕುಂದಲ್ಪಡಿಯವರು ಯುವಕರು ಹೇಗೆ ಹಾದಿ ತಪ್ಪಿದ್ದಾರೆ ಹೇಗೆ ಯುವಕರನ್ನು ದೇಶದ ಸದೃಢ ಪ್ರಜೆಯಾಗಿ ರೂಪಿಸಬಹುದು, ಮುಂದಿನ ದಿನಗಳಲ್ಲಿ ಯುವ ಮೋರ್ಚಾದ ಸದಸ್ಯರು ಸಾರ್ವಜನಿಕವಾಗಿ ಹೇಗೆ ಬೆರೆಯಬೇಕು ಹಾಗು ಕೆಲಸ ಕಾರ್ಯಗಳನ್ನು ಮಾಡಬೇಕೆಂದು ವಿಸ್ತಾರವಾಗಿ ಮಾತನಾಡಿ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಗೆ ಅನ್ಯ ಪಕ್ಷದ ಪೆರಾಜೆ ಗ್ರಾಮದ ಶ್ರೀಧರ್ ಕುಂಡಾಡು, ಕುಞ್ಞಣ್ಣ ನಾಯಕ ಕರಿಭೂತನ ಕೋಡಿ, ಜಗದೀಶ್ ಕುಂಬಳಚೇರಿ ಅವರುಗಳನ್ನು ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪೆರಾಜೆ ಶಕ್ತಿ ಕೇಂದ್ರದ ಪ್ರಮುಖ್ ನಂಜಪ್ಪ ನಿಡ್ಯಮಲೆ , ಸಹಪ್ರಮುಖ್ ಚಿಣ್ಣಪ್ಪ ಅಡ್ಕ, ತಾಲೂಕು ಭಾಜಪ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ್ಲ, ಮಾಜಿ ಪೆರಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೊನ್ನಪ್ಪ ಅಮ್ಮೆಚೂರು, ವಿಎಸ್ಎಸ್ಎನ್ ನಿರ್ದೇಶಕರಾದ ಪ್ರಮೀಳ ಭಾರದ್ವಜ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕಿನ ಬಾಜಪ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮೂಲೆಮಜಲು ಸ್ವಾಗತಿಸಿದರೆ, ಉದಯ ಕುಂಬಳಚೇರಿ ವಂದಿಸಿದರು, ಕಾರ್ಯಕ್ರಮ ನಿರ್ವಹಣೆಯನ್ನು ಕಿರಣ್ ಕುಂಬಳಚೇರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಪವನ್ ತೋಟಂಬೈಲ್, ಪದಾಧಿಕಾರಿಗಳಾದ ಅಕ್ಷಿತ್ ಉಳುವಾರನ, ವಿನೋದ್ ಚೆದುಕಾರು, ಗಯಾನಂದ್ ಉಳುವಾರನ, ಜೀವನ್ ಬೆಳ್ಳಿಯಪ್ಪ ಮಞಂಡ್ರ, ಚೇತನ್ ಕೂಡಕಂಡಿ, ಖಜಾಂಚಿಗಳಾದ ಪ್ರವೀಣ್ ಮಜಿಕೋಡಿ, ಪುನಿತ್ ಕೊಂಪುಳಿರ, ಬಿಜೆಪಿಯ ಹಿರಿಯರು , ಕಾರ್ಯಕರ್ತರು, ಪೆರಾಜೆ ಗ್ರಾಮಸ್ಥರು ಹಾಜರಿದ್ದರು.