fbpx

ಕೋಟೆಗೆ ತಿರಂಗಾ ವಿದ್ಯುತ್ ಅಲಂಕಾರ

ಮಡಿಕೇರಿ: ಸ್ವಾತಂತ್ರ್ಯದ ಅಮೃತೋತ್ಸವ ಅಂಗವಾಗಿ “ಹರ್ ಘರ್ ತಿರಂಗಾ” ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರದ ನಿರ್ದೇಶನದಂತೆ ಅಭಿಯಾನವನ್ನು ಯಶಸ್ವಿಗೊಳಿಸಲು ಶಾಲಾ, ಕಾಲೇಜು, ಅಂಗನವಾಡಿ, ಸರ್ಕಾರಿ ಕಟ್ಟಡದ ಮೇಲೆ ಆಗಸ್ಟ್ 13 ರಂದೇ ರಾಷ್ಟ್ರ ಧ್ವಜ ಹಾರಿಸಲು ಸೂಚನೆ ನೀಡಿದೆ.

ಆ ನಿಟ್ಟಿನಲ್ಲಿ ಮಡಿಕೇರಿ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಸುರಿಯುತ್ತಿರುವ ಮಳೆಯ ನಡುವೆಯೂ ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಕೋಟೆಗೆ ತ್ರಿವರ್ಣಧ್ವಜದ ವಿದ್ಯುತ್ ಅಲಂಕಾರ ಮಾಡಿದ್ದು, ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

error: Content is protected !!