ಮಡಿಕೇರಿ ಇಂದಿರಾ ಕ್ಯಾಂಟೀನಿಗೆ, ಗೋಣಿಕೊಪ್ಪದಿಂದ ಆಹಾರ ವ್ಯವಸ್ಥೆ

ಕೊಡಗು: ವಲಸೆಕಾರ್ಮಿಕರು, ಬಡವರ್ಗದವರು, ನಿರ್ಗತಿಕರಿಗೆ ಕೊರೊನಾ ನಿಮಿತ ನೀಡಲಾಗುತ್ತಿರುವ ಉಚಿತ ಆಹಾರವನ್ನು ಜಿಲ್ಲಾ ಕೇಂದ್ರ ಮಡಿಕೇರಿಗೆ ಗೊಣಿಕೊಪ್ಪದಿಂದ ಸರಬರಾಜಾಗುತ್ತಿದೆ.

ಇದಕ್ಕೆ ಕಾರಣವಾಗಿದ್ದು, ಮಡಿಕೇರಿಯ ಅಡುಗೆ ಕೆಲಸ ಮತ್ತು ಇತರ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು, ಆಹಾರ ಸರಬರಾಜು ಮಾಡುವ ಗುತ್ತಿಗೆ ಪಡೆದಿರುವ ರೀನಾ ಎಂಬುವವರು ಪ್ರತಿನಿತ್ಯ 50 ಮಂದಿಗೆ ಆಹಾರವನ್ನು ಪೊಟ್ಟಣದ ಮೂಲಕ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.ಲಾಕ್ ಡೌನ್ 24ನೇ ತಾರೀಖಿನವರೆಗೆ ಇರುವುದರಿಂದ ಬೆಳ್ಳಗ್ಗೆ ಪಲಾವ್, ಚಿತ್ರನ್ನ ಇಲ್ಲವೇ ಪುಳಿಯೋಗರೆ ನೀಡಲಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಅನ್ನ, ಸಾಂಬಾರ್ ವ್ಯವಸ್ಥೆಯಿದೆ. ಇನ್ನು ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿನ ಕ್ಯಾಂಟೀನ್ ಗಳಲ್ಲಿ ಅಡುಗೆ ತಯಾರಕರು ಇರುವುದರಿಂದ ಬೇಡಿಕೆಯಂತೆ ಆಹಾರ ನೀಡಲಾಗುತ್ತಿದೆ.

error: Content is protected !!