fbpx

ಮಡಿಕೇರಿಯ ‘ಶಕ್ತಿಧಾಮ’ ಪುನರ್ವಸತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆ

ಮಡಿಕೇರಿ‌: ನಗರದ ಡೈರಿಫಾರಂನಲ್ಲಿರುವ ‘ಶಕ್ತಿಧಾಮ ಮಾದಕ ವಸ್ತು ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ(IRCA)ದಲ್ಲಿ ಇಂದು ‘ಅಂತರಾಷ್ಟ್ರೀಯ ಮಾದಕ ವಸ್ತು ದಿನಾಚರಣೆಯನ್ನು’ ಕೋವಿಡ್ ಮಾರ್ಗಸೂಚಿಯಂತೆ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ|| ಸತೀಶ್ ವಿ ಶಿವಮಲ್ಲಯ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾದಕ ವ್ಯಸನ ಸಮಾಜಕ್ಕೆ ಮಾರಕ ಹಾಗು ಹಾನಿಕರ. ಈ ವ್ಯಸನದಿಂದ ಹೇಗೆ ಹೊರಬರಬೇಕು ಹಾಗು ಅದರಿಂದ ಮುಕ್ತವಾಗಿ ಸಮಾಜದಲ್ಲಿ ಗೌರವಯುತ ಬದುಕನ್ನು ಹೇಗೆ ಬದುಕಬೇಕು ಎನ್ನುವುದರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ‘ಮಡಿಕೇರಿ ಮದೆ ಮಹೇಶ್ವರ ಪಿ.ಯು ಕಾಲೇಜಿನ’ ಪ್ರಾಧ್ಯಾಪಕ ಶ್ರೀನಿವಾಸ್ ಮಾತನಾಡಿ, ಮಾದಕ ವ್ಯಸನದ ಕುರಿತು ಹಾಗು ವ್ಯಸನದ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಮಾದಕ ವ್ಯವಸ ಹೇಗೆ ಮನುಷ್ಯನನ್ನು ಸಾವಿನೆಡೆಗೆ ನಡೆಸುತ್ತದೆ ಎನ್ನುವುದರ ಕುರಿತು ಮಾರ್ಮಿಕವಾಗಿ ಮಾತನಾಡಿದ ಅವರು ವ್ಯಸನಕೇಂದ್ರದ ಸಂತ್ರಸ್ತರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಪತ್ರಕರ್ತ ರಂಜಿತ್ ಕವಲಪಾರ ಮಾತನಾಡಿ,’ಮಾದಕ ವ್ಯಸನ ಮುಕ್ತವಾಗುವಲ್ಲಿ ಮಕ್ಕಳ ಪಾತ್ರ ಮಹತ್ವದ್ದು. ಮಕ್ಕಳನ್ನು ನಾವು ಸುಸಂಸ್ಕೃತರಾಗಿ ಬೆಳೆಸಬೇಕು, ಇಲ್ಲಿ ಪೋಷಕರ ಪಾತ್ರ ಹಾಗು ಶಿಕ್ಷಕರ ಪಾತ್ರ ಬಹುಮುಖ್ಯ. ನಮ್ಮ ಮನೆಯ ಮಕ್ಕಳನ್ನು ನಾವು ನಿಗವಹಿಸಿ, ಸಮಾಜಕ್ಕೆ ಆದರ್ಶವಾಗಿಸಿದರೆ, ಉತ್ತಮ ಪ್ರಜೆಯಾಗಿಸಿ ಬೆಳೆಸಿದರೆ ದೇಶದ ಉದ್ದಾರ ಸಾಧ್ಯ. ನಮ್ಮವರನ್ನು ನಾವು ತಿದ್ದಬೇಕು. ಆಗ ಸಮಾಜ ತನ್ನಷ್ಟಕ್ಕೆ ಸುಧಾರಣೆಯಾಗುತ್ತದೆ’ ಎಂದರು.

ಕಾರ್ಯಕ್ರಮದ ಅಥಿತಿಗಳಾಗಿ ಶಕ್ತಿಧಾಮದ ಯೋಜನಾ ಸಹಾಯಕ ಪ್ರಭು, ಮಾಜಿ ನಗರಸಭಾ ಸದಸ್ಯ ಪೀಟರ್, ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್, ಸಮಾಜ‌ ಸೇವಕ ವಿನು ಹೆಚ್ ಆರ್ ಹಾಗು ಸಮೀರ್ ಹಾಜರಿದ್ದರು.

error: Content is protected !!