ಮಡಿಕೇರಿಯ ನಗರಸಭೆ ಉದ್ಯಾನವನವನ್ನು ದತ್ತು ಪಡೆದ ‘ಇಳೆ’ ತಂಡ

ಮಡಿಕೇರಿ ಜು29 :- ‘ವಿಶ್ವ ಸಂರಕ್ಷಣಾ’ ದಿನಾಚರಣೆ ಅಂಗವಾಗಿ ಇಂದು ಮಡಿಕೇರಿ ನಗರದ ಓಂಕಾರೇಶ್ವರ ರಸ್ತೆಯ, ಗೌರಿ ಕೆರೆ ಬಳಿ ಇರುವ ‘ನಗರಸಭೆ ಉದ್ಯಾನವನವನ್ನು’ ಪರಿಸರ ಸ್ನೇಹಿ ಯುವ ಜನರ ‘ಇಳೆ’ ತಂಡ ದತ್ತು ಸ್ವೀಕರಿಸುವ ಮೂಲಕ ವಿನೂತನವಾಗಿ ಆಚರಿಸಿತು.

ಈ ಸಂದರ್ಭ ಸಾಂಕೇತಿಕವಾಗಿ ಉದ್ಯಾನವನದಲ್ಲಿ ಗಿಡನೆಡುವ ಮೂಲಕ ಉದ್ಯಾನವನದ ಸಂರಕ್ಷಣೆಗೆ ಸಾಂಕೇತಿಕ ಪ್ರಾರಂಭವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಆಯುಕ್ತ ರಾಮದಾಸ್ ಮಾತನಾಡಿ, ‘ಉದ್ಯಾನವನಗಳ ಜವಾಬ್ದಾರಿಗಳನ್ನು ಇಂತಹ ಸಂಘ ಸಂಸ್ಥೆಗಳು ಮುಂದೆ ಬಂದು ದತ್ತು‌ ಪಡೆಯುವ ಅವಕಾಶ ಕಾನೂನಾತ್ಮಕವಾಗಿದ್ದು, ಸಂಘ-ಸಂಸ್ಥೆಗಳು ಮುಂದೆ ಬಂದರೆ, ನಗರಸಭೆ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತದೆ. ಆ ಮೂಲಕ ನಗರದ ಉದ್ಯಾನ ವನಗಳಿಗೆ ಕಾಯಕಲ್ಪ ನೀಡಿ, ನಗರವನ್ನು ಅಂದಗೊಳಿಸಲು ಸಾಹಯವಾಗುತ್ತದೆ, ಈ ನಿಟ್ಟಿನಲ್ಲಿ ‘ಇಳೆ’ ತಂಡ ಇಂದು ಸಾಂಕೇತಿಕವಾಗಿ ಗಿಡನೆಟ್ಟು, ಉದ್ಯಾನವನವನ್ನು ದತ್ತು ಪಡೆಯುವ ಮೂಲಕ ‘ವಿಶ್ವ ಸಂರಕ್ಷಣಾ’ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತೋಷದ ವಿಚಾರ’ ಎಂದರು.

ಕಾರ್ಯದಲ್ಲಿ ‘ಇಳೆ’ ತಂಡದ ಸ್ಥಾಪಕಾಧ್ಯಕ್ಷ ರಂಜಿತ್ ಜಯರಾಂ, ಕಾರ್ಯಕ್ರಮದ ಅಥಿತಿಗಳಾಗಿ ಗ್ರೀನ್ ಸಿಟಿ ಫಾರಂ ಅಧ್ಯಕ್ಷ ಚೆಯ್ಯಂಡ ಸತ್ಯ ಗಣಪತಿ, ನಗರಸಭೆ ಸದಸ್ಯ ಚಂದ್ರಶೇಖರ್, ಹಿಂದೂ ಮಹಾಸಭೆಯ ಅಧ್ಯಕ್ಷ ಶ್ರೀನಿವಾಸ್ ರೈ, ಉಮೇಶ್ ಗೌಡ ಹಾಗು ‘ಇಳೆ’‌ ತಂಡದ ಪದಾಧಿಕಾರಿಗಳಾದ ಡೀನಾ ಪರ್ಲಕೋಟಿ, ನಿರಂಜನ್, ಅರವಿಂದ್, ಅತುಲ್, ಶರತ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!