ಮಡಿಕೇರಿಯ ಗಾಳಿಬೀಡುವಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ

ಮಡಿಕೇರಿ:- ಗಾಳಿಬೀಡು ಪ್ರೌಢ ಶಾಲಾ ಮೈದಾನದಲ್ಲಿ ದಿನಾಂಕ 12.03.2022 ಮತ್ತು 13.03.2022 ರಂದು ಮೊದಲನೇ ವರ್ಷದ ಕ್ರಿಕೆಟ್ ಹಬ್ಬವನ್ನು ನಡೆಸಲಾಯಿತು. ಈ ಕ್ರಿಡಾಕೂಟವು ಐಪಿಎಲ್ ಮಾದರಿಯಲ್ಲಿ ನಡೆಸಲಾಗಿದ್ದು, ಗಾಳಿಬೀಡು,1ನೆ ಮೊಣ್ಣಂಗೇರಿ, ಹಾಗೂ ವಣಚಲು ಗ್ರಾಮದ ಆಟಗಾರರಿಗೆ ಅವಕಾಶ ನೀಡಿರುತ್ತಾರೆ.

ಕ್ರಿಕೆಟ್ ಆಟವನ್ನು ಏರ್ಪಡಿಸುವುದು ಎಂದರೆ ಸುಲಭದ ಕೆಲಸವಲ್ಲ,ನಮ್ಮ ಊರಿನಲ್ಲೂ ಕ್ರಿಕೆಟ್ ಪಂದ್ಯವನ್ನು ಹಮ್ಮಿಕೊಳ್ಳೋಣ ಎಂದು ಕೆಲ ಆಟಗಾರರೊಂದಿಗೆ, ಹಾಗೂ ಊರಿನವರೊಂದಿಗೆ ಚರ್ಚೆಯನ್ನು ಮಾಡಿ ಅದಕ್ಕೆ ಎಲ್ಲರ ಒಪ್ಪಿಗೆಯನ್ನು ಪಡೆದು ತಂಡ ರಚನೆ ಮಾಡಿ ಆಡುವುದು ಎಂದರೆ ನಾವು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ.
ಹಿರಿಯರು ಹೇಳಿದಂತೆ ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವ ಮಾತಿನಂತೆ ಎಲ್ಲರು ಕೈ ಜೋಡಿಸಿದರೆ ಕ್ರಿಕೆಟ್ ಪಂದ್ಯ ಏರ್ಪಡಿಸಲು ಸಾಧ್ಯ ಎಂದು 2 ದಿನದ ಪಂದ್ಯವನ್ನು ಏರ್ಪಡಿಸಲಾಯಿತು.
ಎರಡು ದಿನದ ಪಂದ್ಯಕ್ಕಾಗಿ ಅಲ್ಲಿನ ಯುವಕರು ಒಂದು ವಾರದಿಂದ ಸತತವಾಗಿ ಶ್ರಮಪಟ್ಟು ಮೈದಾನವನ್ನು ಸ್ವಚ್ಛಗೊಳಿಸಿ,ಪಂದ್ಯದಲ್ಲಿ ಯಾವುದೇ ರೀತಿಯ ತೊಡಕು ಬಾರದಂತೆ ಮೈದಾನವನ್ನು ಸ್ವಚ್ಛಗೊಳಿಸಿದರು. ಪಂದ್ಯವನ್ನು ಏರ್ಪಡಿಸಬೇಕೆಂದರೆ ಹಣದ ಅವಶ್ಯಕತೆ ಮುಖ್ಯವಾದುದು. ಹಾಗೆಯೇ ಊರಿನಲ್ಲಿ ಹಣದ ಸಂಗ್ರಹಣೆಗೆ ತೊಡಗಿಸಿಕೊಂಡು,ನಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಟಿವಿಯಲ್ಲಿ ನಾವು ಐಪಿಎಲ್ ಇನ್ನಿತರ ಕ್ರೀಡೆಗಳನ್ನು ವೀಕ್ಷಿಸುತ್ತೇವೆಯೋ ಹಾಗೆಯೇ ಗಾಳಿಬೀಡುವಿನಲ್ಲಿ ನಡೆಯುವ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸುವ ಹಾಗೆ ಮಾಡಬೇಕು ಎಂದು ಆಲೋಚಿಸಿ ಯೂಟ್ಯೂಬ್ ನಲ್ಲಿ ಪಂದ್ಯವನ್ನು ನೆರಪ್ರಸಾರ ದಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು.
ಪಂದ್ಯದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಿ ತಂಡ

೧.ಸ್ನೇಹಿತರ ಯುವಕ ಸಂಘ

೨ Team Maxwell

೩.Royal challengers gaalibeedu

೪.SS Friend’s ತಂಡಗಳು ಇಂತಿವೆ.

ನಾಲ್ಕು ತಂಡಗಳು ಉತ್ತಮವಾದ ಪ್ರದರ್ಶನ ನೀಡಿ ಆಕರ್ಷಕಾರ ಟ್ರೋಫಿಯೊಂದಿಗೆ ಮೊದಲನೇ ಸ್ಥಾನವನ್ನು Team Maxwell ಈ ತಂಡವು ಗಳಿಸಿದ್ದು ದ್ವಿತೀಯ ಸ್ಥಾನವನ್ನು SS Friend’s ಈ ತಂಡವು ಗಳಿಸಿಕೊಂಡಿದೆ

ವರದಿ :- ಅಮೃತ್ ಪೆಮ್ಮಟ್ಟೆ

error: Content is protected !!