‘ಮಡಿಕೇರಿಯಲ್ಲಿ ಹಸಿಕಸ ಸಂಸ್ಕರಣಾ’ ಯೋಜನೆಗೆ ಚಾಲನೆ

ಕೊಡಗು: ಮಡಿಕೇರಿ ನಗರಸಭಾ ವ್ಯಾಪ್ತಿಯ ಸ್ಟೋನ್ ಹಿಲ್ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ‘ಹಸಿಕಸ ಸಂಸ್ಕರಣಾ ಯೋಜನೆಗೆ (ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನ) ಚಾಲನೆ ನೀಡಲಾಗಿದೆ.
ಚಾಲನೆ ನೀಡಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘30.50 ಲಕ್ಷ ರೂ. ವೆಚ್ಚದಲ್ಲಿ ಹಸಿಕಸ ಸಂಸ್ಕರಣಾ ಘಟಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ಯಶಸ್ವಿಯಾದಲ್ಲಿ ಹೆಚ್ಚಿನ ಘಟಕ ನಿರ್ಮಿಸಲಾಗುವುದು’ ಎಂದು ತಿಳಿಸಿದರು.