fbpx

ಮಡಿಕೇರಿಯಲ್ಲಿ ಸರಳ‌ ದೀಪಾವಳಿ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ

ಮಡಿಕೇರಿ :‌ ನಗರದ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆ(ರಿ) ವತಿಯಿಂದ ರಾಘವೇಂದ್ರ ದೇವಾಲಯದ ಬಳಿ ಸರಳ ದೀಪಾವಳಿ ಹಬ್ಬದ ಆಚರಣೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ದಿನಾಂಕ ಅಕ್ಟೋಬರ್ 26 ರ ಬುಧವಾರ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಗೆ ಹಾಗೂ ಸಂಘದ ಸದಸ್ಯರ ಕುಟುಂಬದವರಿಗೆ ವಿವಿಧ ಆಟೋಟ‌ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಮಹೇಶ್ ಆರ್, ನಿವೃತ ಯೋಧ ಅಯ್ಯಪ್ಪ, ಶಿಕ್ಷಕ ಭರತ್ ಕೋಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರವಿ ಪಿ.ಯಂ ಅವರು ದೀಪ ಬೆಳಗುವ ಮೂಲಕ ಆಟೋಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷರು ಮಹೇಶ್. ಆರ್, ಉಪಾಧ್ಯಕ್ಷರು ಸತೀಶ್ ಬಿ. ಎಸ್, ಖಜಾಂಚಿ ವರದರಾಜ್, ಕಾರ್ಯಧ್ಯಕ್ಷರು ನಾರಾಯಣ, ಕಾರ್ಯದರ್ಶಿ ಅಶೋಕ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಹಲವಾರು ವರ್ಷಗಳಿಂದ ವಿಜೃಂಭಣೆಯಿಂದ ನಡೆಯುತ್ತಿದ್ದ ಕಾರ್ಯಕ್ರಮವನ್ನು ಸಂಘದ ಸದಸ್ಯ ನಂದೀಶ್ ಅವರ ಅಗಲಿಕೆಯಿಂದಾಗಿ ಈ ಬಾರಿ ಸರಳವಾಗಿ ನಡೆಸಲಾಯಿತು.

ಅಗಲಿದ ನಂದೀಶ್ ಬಿ.ಸಿ, ಕೋಡಿ ಚಂದ್ರಶೇಖರ್, ವಿಶ್ವನಾಥ್, ಪಿ.ಬಿ ಬಾಲಪ್ಪ ರೈ, ಸೂದಾಡಮ್ಮನ ಗೌರಮ್ಮ, ತಂಗಮ್ಮ.ಕೆ‌, ದೇವಕಿ, ಅನುಷಾ ಅವರಿಗೆ ಐದು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿಯನ್ನು ಸಂಜೆ ಮೌನ ಪ್ರಾರ್ಥನೆಯ ಮೂಲಕ ಸಲ್ಲಿಸಲಾಯಿತು.

ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ಕೊಡಗಿನ ಹೆಸರಾಂತ ಗಾಯಕ, ಸುದ್ದಿ ಸಂತೆ ಸಂಪಾದಕ ರಜತ್ ರಾಜ್ ಡಿ.ಹೆಚ್ ಅವರಿಂದ ಒಂದು ಗಂಟೆಗಳ ಕಾಲ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಿನು ಹಾಗೂ ಗಾಯಕ ರಜತ್ ರಾಜ್ ಡಿ.ಹೆಚ್ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಕಾವೇರಿ, ಶ್ರೀಮತಿ ಮಂಜುಳ, ಶ್ರೀಮತಿ ಅನಿತಾ, ಕಿತ್ತೂರು ಚೆನ್ನಮ್ಮ ಮಹಿಳಾ ಸಂಘದ ಶ್ರೀಮತಿ ತಂಗಮಣಿ, ಶಕ್ತಿದಿನಪತ್ರಿಕೆಯ ಕ್ರೀಡಾ ಅಂಕಣಕಾರ ಹರೀಶ್ ಸರಳಾಯ, ಕಿಡ್ಸ್ ಪ್ಯಾರಾಡೈಸ್ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿಂದು ಹರೀಶ್‌,  ಪತ್ರಕರ್ತರಾದ ರಂಜಿತ್ ಕವಲಪಾರ, ಕೌಸರ್ ಮಡಿಕೇರಿ ಮೊದಲಾದವರು ಭಾಗವಹಿಸಿದ್ದರು.

ಆಟೋಟ ಸ್ಪರ್ಧೆಗಳ ವಿಜೇತರು

ಲೆಮೆನ್ ಆನ್ ಸ್ಪೂನ್ ಮಹಿಳೆಯರು

ಶ್ರೀಮತಿ ವಿಮಲ ಪ್ರಥಮ
ಶ್ರೀಮತಿ ಭವಾನಿ ದ್ವಿತೀಯ
ಶ್ರೀಮತಿ ಆಶಾ ತೃತೀಯ

ಕಾಳು ಹೆಕ್ಕುವುದು (ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು)

ಕುಶಾಲ್
ಸನಾ
ದೃತಿ

ಬಾಲ್ ಇನ್ ದ ಬಕೆಟ್ (1-3 ವರ್ಷ)

ಸಾವಿತ್ರಿ
ಮೌರ್ಯ
ಅಕುಲ್

ಪಾಸಿಂಗ್ ದ ಬಾಲ್ (4-6ವರ್ಷ)

ಇಶಾನಿ
ವರ್ಷ
ತೇಜಸ್

ಪಾಸಿಂಗ್ ದ ಬಾಲ್ (7-10 ವರ್ಷ)
ಹರ್ಷಿತ್
ದಿಗಂತ್
ದ್ರುವ

ಮ್ಯೂಸಿಕಲ್ ಚೇರ್ ಮಹಿಳೆಯರಿಗೆ
ರಕ್ಷಿತಾ
ಅಶ್ವಿನಿ
ದಿವ್ಯ

ಪುರುಷರೀಗೆ ಪಾಸಿಂಗ್ ದ ಬಾಲ್
ನಾರಾಯಣ
ವರದರಾಜ್
ಶ್ರೀನಿವಾಸ್

ಮಹಿಳೆಯರಿಗೆ ಪಾಸಿಂಗ್ ದ ಬಾಲ್
ಪ್ರೇಮ
ಮಂಜುಳಾ
ಚಂದ್ರಾವತಿ

ಎರಡನೇ ಸುತ್ತು ಪಾಸಿಂಗ್ ದ ಬಾಲ್ ಮಹಿಳೆಯರು
ಸುಮಿತ್ರ
ಮೀನಾ
ಮಂಜುಳ

ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ಪುರುಷರೀಗೆ
ನಾರಾಯಣ
ಮಿಟ್ಟು
ವರದರಾಜ್

ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ಮಹಿಳೆಯರಿಗೆ.
ಮಹಾ ಲಕ್ಷ್ಮಿ
ಹಂಸ
ಸುಮಿತ್ರ

ಮಹಿಳೆಯರ ಹಗ್ಗ ಜಗ್ಗಾಟ
ಮಲ್ಲಿಗೆ ಟೀಮ್ ಪ್ರಥಮ
ಮಂಜುಳ ಟೀಮ್ ದ್ವಿತೀಯ

ಪುರುಷರ ಹಗ್ಗಜಗ್ಗಟಾ
ನಾರಾಯಣ ಟೀಮ್ ಪ್ರಥಮ
ಅಶೋಕ ಟೀಮ್ ದ್ವಿತೀಯ

ಲಕ್ಕಿ ಡಿಪ್ ವಿಜೇತರು

ಮಂಜುಳ ಪ್ರಥಮ
ಅಮೃತ ದ್ವಿತೀಯ
ದಿನೇಶ್ ಕೆ. ಸಿ ತೃತೀಯ

error: Content is protected !!
satta king chart