fbpx

ಮಡಿಕೇರಿಯಲ್ಲಿ ನೃತ್ಯ ವೈಭವ-ಸಾಂಸ್ಕೃತಿಕ ಸ್ಪರ್ಧೆ

ಮಡಿಕೇರಿ,ಮೇ.೨೪; ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ನೃತ್ಯ ವೈಭವ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದೆ. ತಾ.೨೮ರಂದು ಮಧ್ಯಾಹ್ನ ೩ ಗಂಟೆಯಿAದ ನಗರದ ಪೊಲೀಸ್ ಮೈತ್ರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಪ್ರಶಸ್ತಿ ವಿಜೇತ ರಾಹುಲ್ ರಾವ್, ಡಿಕೆಡಿಯಲ್ಲಿ ಭಾಗವಹಿಸಿದ್ದ ಚೈತ್ರಾಲಿ ಹಾಗೂ ಮಿಥುನ್ ಮುದ್ದಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾಗುವ ತಂಡಗಳಿಗೆ ಕ್ರಮವಾಗಿ ರೂ.೨೦೦೦೦, ೧೦೦೦೦,೫೦೦೦ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವದು. ಪ್ರೇಕ್ಷಕರಿಗೆ ಉಚಿತ ಪ್ರವೇಶ ಇರುವದಾಗಿ ಕಿಂಗ್ಸ್ನ ನೃತ್ಯ ಸಂಯೋಜಕ ಮಹೇಶ್ ತಿಳಿಸಿದ್ದಾರೆ.

error: Content is protected !!