ಮಠದ ಗದ್ದೆಯಲ್ಲಿ ಕಸವಿಲೇವಾರಿ: ಸಾರ್ವಜನಿಕರ ಆಕ್ರೋಶ

ಕೊಡಗಿನ ವಿರಾಜಪೇಟೆ ಮೂಲಕ ಮೂರ್ನಾಡು ರಸ್ತೆ ಯಲ್ಲಿರುವ ಹೆಸರಾಂತ ಮಠದ ಗದ್ದೆ ಎನ್ನುವ ಪ್ರದೇಶದಲ್ಲಿ ಕಸವಿಲೇವೇರಿ ನಡಿಯುತ್ತಿದ್ದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಅಕ್ಕಪಕ್ಕದ ವಾಸಿಗಳು ಮತ್ತು ಸಾರ್ವಜನಿಕರು, ಹೊಟೇಲ್,ಮಾಂಸ ತ್ಯಾಜ್ಯ ಸಹ ಇಲ್ಲಿ ವಿಲೇವಾರಿಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದು ದುರ್ನಾತ ದಿಂದ ಓಡಾಡಲು ಕಷ್ಟವಾಗಿರುವ ಸನ್ನಿವೇಶ ನಿರ್ಮಾಣ ವಾಗುತ್ತಿದೆ ಎಂದು ಸ್ಥಳೀಯರು ಗ್ರಾಮ ಪಂಚಾಯಿತಿಯ ವಿರುದ್ದ ತಿರುಗಿಬಿದ್ದಿದ್ದಾರೆ.