fbpx

ಮಗನಿಗೆ ಕಾಂಗ್ರೆಸ್ ಟಿಕೆಟ್,ಅಪ್ಪ ಬಿಜೆಪಿಯಿಂದ ಔಟ್!

ಮೇಲ್ಮನೆ ಚುನಾವಣೆ ಸಾಕಷ್ಟು ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತಿದ್ದು, ಇದೀಗ ಬಿಜೆಪಿಯಿಂದ ಸಚಿವರಾಗಿ,ಸದ್ಯ ಮಾಜಿಯಾಗಿರುವ ಎ.ಮಂಜು ತಮ್ಮ ಪುತ್ರ ಡಾ.ಮಂಥರ್ ಗೌಡರಿಗೆ ಕೊಡಗಿನಿಂದ ಕಾಂಗ್ರೆಸ್ ಟಿಕೇಟ್ ಕೊಡೆಸಿದ ತಪ್ಪಿಗೆ ಬಿಜೆಪಿಯಿಂದ ಉಚ್ಚಾಟನೆಗೊಳಿಸಿರುವುದಾಗಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಟಿಕೇಟಿಗಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡು ಜೆಡಿಎಸ್ ನ ಪ್ರಜ್ವಲ್ ರೇವಣ್ಣ ವಿರುದ್ದ ಪರಾಜಿತರಾಗಿದ್ದರು.ಇದೀಗ ಬಿಜೆಪಿಯಿಂದ ನೀಡಲಾಗಿದ್ದ ಮಂಡ್ಯ ಜಿಲ್ಲೆಯ ಪ್ರಭಾರಿ ಸೇರಿದಂತೆ ಎಲ್ಲಾ ಜವಾಬ್ದಾರಿಯಿಂದ ಎ.ಮಂಜುರನ್ನು ಬಿಜೆಪಿ ಮುಕ್ತ ಗೊಳಿಸಿದೆ.

error: Content is protected !!