ಮಕ್ಕಳ ದಸರಾ ಪ್ರಯುಕ್ತ ವಿವಿಧ ಸ್ಪರ್ಧೆಗಳ ಆಯೋಜನೆ

ಕಾವೇರಿ ದಸರಾ ಸಮಿತಿ(ರಿ) ವತಿಯಿಂದ ಮಕ್ಕಳ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು,

ಈ ಪ್ರಯುಕ್ತ ದಿನಾಂಕ: 28.09.2022ರ ಬುಧವಾರ ದಸರಾ ಚೆಸ್ ಪಂದ್ಯಾಟ ವನ್ನೂ ಅನುದಾನಿತ ಪ್ರೌಢಶಾಲಾ ಆವರಣ, ಗೋಣಿಕೊಪ್ಪಲವಿನಲ್ಲಿ ಏರ್ಪಡಿಸಲಾಗಿದೆ…

ದಿನಾಂಕ: 29.9 2022ರ ಗುರುವಾರ ಬೆಳಗ್ಗೆ 10ಗಂಟೆಗೆ ವಿದ್ಯಾರ್ಥಿಗಳ ವಿಜ್ಞಾನ ಮೇಳ ವನ್ನು ಜಿ.ಎಂ.ಪಿ. ಶಾಲಾ ಆವರಣ, ಗೋಣಿಕೊಪ್ಪಲುವಿನಲ್ಲಿ ಏರ್ಪಡಿಸಲಾಗಿದೆ

ದಸರಾ ಚಿತ್ರಕಲಾ ಸ್ಪರ್ಧೆ ಯನ್ನು ದಿನಾಂಕ: 30-09-2022ರ ಶುಕ್ರವಾರದಂದು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನ, ಗೋಣಿಕೊಪ್ಪಲುವಿನಲ್ಲಿ ಏರ್ಪಡಿಸಲಾಗಿದೆ…

ಗುರುವಾರ ಕಾವೇರಿ ಕಾಲ ವೇದಿಕೆ ಗೋಣಿಕೊಪ್ಪದಲ್ಲಿ ಮಕ್ಕಳ ಸಂತೆ, ರಂಗೋಲಿ ಸ್ಪರ್ಧೆ, ಜಾನಪದ ನೃತ್ಯ, ದೇಶ ಭಕ್ತಿ ಗೀತೆ, ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

error: Content is protected !!