ಮಕ್ಕಂದೂರು ಗೌಡ ಸಮಾಜ ಮಹಾಸಭೆ

ಮಡಿಕೇರಿ, ಏ.1; ಇಲ್ಲಿಗೆ ಸಮೀಪದ ಮಕ್ಕಂದೂರು ಗೌಡ ಸಮಾಜದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ ತಾ.10ರಂದು ಬೆಳಿಗ್ಗೆ 10 ಗಂಟೆಗೆ ಅಲ್ಲಿನ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ತೂಟೇರ ಡಿ.ವೆಂಕಟರಮಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಮಾಜದ ಮಾಜಿ ಅಧ್ಯಕ್ಷರಾದ ಕುಂಬಗೌಡನ ಉತ್ತಪ್ಪ ಹಾಗೂ ಮಾಜಿ ಕಾರ್ಯದರ್ಶಿ ಮಳ್ಳನ ಸುಬ್ಬಯ್ಯ ಅವರುಗಳನ್ನು ಸನ್ಮಾನಿಸಲಾಗುವದೆಂದು ಕಾರ್ಯದರ್ಶಿ ಮಳ್ಳನ ಎಸ್. ವಿಜಯಕುಮಾರ್ ತಿಳಿಸಿದ್ದಾರೆ.