ಮಂದ್ ತೊರ್‍ಪೊ ಕಾರ್ಯಕ್ರಮ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಶನಿವಾರ ಬೇಗೂರಿನ ಪೂಳೆಮಾಡ್ ಮಂದ್‍ನಲ್ಲಿ “ಮಂದ್ ತೊರ್‍ಪೊ ಕಾರ್ಯಕ್ರಮ” ನಡೆಯಿತು. ಬೇಗೂರಿನ ನಾಡ್ ತಕ್ಕರಾದ ಬೈರಂಡ ಪೂಣಚ್ಚ ಅವರು ಮಂದ್ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೂಳೆಮಾಡ್ ಈಶ್ವರ ದೇವಸ್ಥಾನ ಅಧ್ಯಕ್ಷರಾದ ಬೊಳ್ಳಿಯಂಗಡ ದಾದು ಪೂವಯ್ಯ ಅವರು ಮಾತನಾಡಿ ಪ್ರತಿ ನಾಡಿನಲ್ಲಿರುವ ಮಂದ್‍ನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಇಂದಿನ ಯುವ ಜನತೆ ನಮ್ಮ ಸಂಸ್ಕøತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಪೂಳೆಮಾಡ್ ಈಶ್ವರ ದೇವಸ್ಥಾನದ ದೇವಸ್ಥಾನ ಮುಖ್ಯಸ್ಥರಾದ ಮತ್ರಂಡ ಪೂಣಚ್ಚನವರು ಇಂದಿಗೂ ಕೆಲವು ನಾಡಿನಲ್ಲಿ ಮಂದ್‍ಗಳು ಮುಚ್ಚಿಹೋಗಿರುತ್ತದೆ. ಮಂದ್‍ಗಳಲ್ಲಿ ನಾಡ್ ಮಂದ್ ಹಾಗೂ ಊರ್ ಮಂದ್ ಇರುತ್ತದೆ. ಊರಿನೊಳಗಡೆ ಕೇರಿಮಂದ್, ಅಂಬಲ ಹೀಗೆ ನಮ್ಮ ಸಂಸ್ಕøತಿಯಲ್ಲಿ ಕಾಣಬಹುದು. ನಾವುಗಳು ಕೈಜೋಡಿಸಿದರೆ ಮಂದ್‍ಗಳು ಮುಂದೇ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಯೋಜನೆಯಲ್ಲಿ ಮುಚ್ಚಿ ಹೋಗಿರುವ ಮಂದ್‍ಗಳನ್ನು ತೆರೆದು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿರುತ್ತೇವೆ. ಮಂದ್ ಮಾನಿಗಳು ಉಳಿದರೆ ನಮ್ಮ ಸಂಸ್ಕøತಿ, ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬಹುದು ಎಂದರು.
ಪೂಳೆಮಾಡ್ ಈಶ್ವರ ದೇವಸ್ಥಾನದ ತಕ್ಕರಾದ ಚೇಂದೀರ ಮಧು ಕರುಂಬಯ್ಯ, ಪೂಳೆಮಾಡ್ ಈಶ್ವರ ದೇವಸ್ಥಾನದ ಬಂಡಾರ ತಕ್ಕರಾದ ಮಲ್ಲಂಡ ನಾಚಪ್ಪ, ಕೃಷಿಕರಾದ ಕಾರಪಂಡ ಗಿರೀಶ್, ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ಪೂಮಾಲೆ ವಾರಪತ್ರಿಕೆಯ ಸಂಪಾದಕರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ನವರು “ಕೊಡಗ್‍ರ ಮಂದ್ ಮಾನಿ” ವಿಷಯದ ಕುರಿತಾಗಿ ಅರ್ಥಪೂರ್ಣವಾಗಿ ವಿಚಾರಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಮಂದತವ್ವ ಕೊಡವ ಸಾಂಸ್ಕøತಿಕ ಟ್ರಸ್ಟ್ ಇವರಿಂದ ಸ್ವಾಗತನೃತ್ಯ, ಗೆಜ್ಜೆತಂಡ್ ನೃತ್ಯ, ಚಿಣ್‍ಕ್‍ಮಳೆ ನೃತ್ಯ, ಬೇಗೂರು ತಂಡದಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಉಮ್ಮತ್ತಾಟ್ ನೃತ್ಯ, ಹಾಗೂ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕೊಡವ ಸಾಂಸ್ಕøತಿಕ ನೃತ್ಯ ಪ್ರದರ್ಶನ ಇದ್ದವು.

error: Content is protected !!