fbpx

ಮಂಗಳೂರು ವಿವಿ ಪ್ರೊಫೆಸರ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮತ್ತೆ ಮರು ಜೀವ!

ಮಂಗಳೂರು, ಅಕ್ಟೋಬರ್ 18 : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

ಮಂಗಳೂರು ವಿವಿ ಅರ್ಥಶಾಸ್ತ್ರದ ಪ್ರೊಫೆಸರ್ ಅರಬಿ

ಕಿರುಕುಳ ಆರೋಪ ಎದುರಿಸುತ್ತಿರುವ ಅರ್ಥಶಾಸ್ತ್ರದ ಪ್ರೊಫೆಸರ್ ಅರಬಿಯನ್ನು ತಕ್ಷಣದಿಂದಲೇ ಸಸ್ಪೆಂಡ್ ಮಾಡಬೇಕೆಂದು ಮಂಗಳೂರು ಯುನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರೂ ಆಗಿರುವ ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ. 

ಮಂಗಳೂರು ಉತ್ತರ ಶಾಸಕ ಶ್ರೀ ಭರತ್ ಶೆಟ್ಟಿ

2018ರಲ್ಲಿ ವಿವಿಯ ಅಂತರಿಕ ತನಿಖಾ ಸಮಿತಿ ಪ್ರೊಫೆಸರ್ ವಿರುದ್ಧ ತನಿಖೆ ನಡೆಸಿ ವರದಿ ನೀಡಿದ್ದರೂ ವಿವಿ ಆಡಳಿತ ಅದನ್ನು ಮುಚ್ಚಿ ಹಾಕಿತ್ತು. ಯಾವುದೇ ಶಿಸ್ತು ರೀತಿಯ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿ ಹೋಗಿದ್ದದು ತಪ್ಪು ಸಂದೇಶ ನೀಡಿತ್ತು. ಇತ್ತೀಚೆಗೆ ಮಹಿಳಾ ಆಯೋಗ ವರದಿ ಕುರಿತು ಕೇಳಿದ್ದರಿಂದ ಮಂಗಳೂರು ವಿವಿ ಎಚ್ಚೆತ್ತುಕೊಂಡಿದೆ. ಈ ಸಂಬಂಧ ಕಾನೂನು ಕ್ರಮ ಜರುಗಿಸಬೇಕು. ಮತ್ತು ಇಂತಹ ಪ್ರಕರಣಗಳು ಮತ್ತೆ ಮರುಕಳಿಸುವಂತೆ ಆಗಬಾರದು ಎಂದು ಶಾಸಕರು ಡಿಸಿಎಂಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.ಮುಂದಿನ ಬೆಳವಣಿಗೆ ಏನಾಗಲಿದೆ ಕಾದು ನೋಡಬೇಕಷ್ಟೆ!

error: Content is protected !!