fbpx

ಮಂಗಳೂರು ವಿವಿಯ ಪರೀಕ್ಷೆ ಆನ್‌ಲೈನ್‌ನಲ್ಲಿ ನಡೆಸಲು ತೀರ್ಮಾನ…!?

ಪದವಿ ಪರೀಕ್ಷೆ ಕುರಿತಂತೆ ಕುಲಪತಿ ಹೇಳಿದ್ದೇನು…?


ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ಆರನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ಮಂಗಳೂರು ವಿ.ವಿ ಚಿಂತನೆ ಮಾಡುತ್ತಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ ಕೊನೆಯೊಳಗೆ ಪರೀಕ್ಷೆ ನಡೆಸಿ ಶೀಘ್ರವೇ ಫಲಿತಾಂಶವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಆತಂಕವನ್ನು ದೂರ ಪಡಿಸುವುದು ಇದರ ಮುಖ್ಯ ಉದ್ದೇಶ.

ಪದವಿ ತರಗತಿಗಳ 1,3, 5ನೇ ಸೆಮಿಸ್ಟರ್ ಪರೀಕ್ಷೆಗಳು ಕೊನೆಯ ಹಂತದಲ್ಲಿದೆ. ಮೌಲ್ಯಮಾಪನ ಕೂಡ ಅಂತಿಮ ಹಂತದಲ್ಲಿದೆ.
ಇದಾದ ಬಳಿಕ ಕೂಡಲೇ ಎರಡನೇ ನಾಲ್ಕನೇ ಸೆಮಿಸ್ಟರ್ ಫಾರ್ಮುಲಾ ಆಧಾರಿತ ಪ್ರಮೋಷನ್ ಮಾಡಲಾಗುತ್ತದೆ.

ಕೊವಿಡ್ ಹಿನ್ನೆಲೆಯಲ್ಲಿ ತರಗತಿಗಳು ಕೂಡ ಆನ್ ಲೈನ್ ನಡೆದಿರುವ ಕಾರಣ ಪರೀಕ್ಷೆಗಳನ್ನು ಆನ್ ಲೈನ್ ನಲ್ಲಿ ನಡೆಸುವುದು ಸುಲಭ ಈ ಬಗ್ಗೆ ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ತಿಳಿಸಿದ್ದಾರೆ.

error: Content is protected !!