fbpx

ಮಂಗಳೂರು ಟು ಮೈಸೂರು ಏರ್ ಅಲೈನ್ಸ್

ಕೊಡಗು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮಂಗಯಳೂರಿನ ಬಜ್ಪೆ ವಿಮಾನ ನಿಲ್ದಾಣದವರೆಗೆ ಇನ್ನು ಮುಂದೆ ವಿಮಾನ ಹಾರಾಟ ನಡೆಯಲಿದೆ.ಏರ್ ಅಲಯನ್ಸ್ ಸಂಸ್ಥೆಯ ವಿಮಾನ ಇದಾಗಿದ್ದು ಪ್ರತೀ ಬುಧವಾರ,ಶುಕ್ರವಾರ,ಶನಿವಾರ ಮತ್ತು ಭಾನುವಾರ ಮೈಸೂರಿನಿಂದ ಮಂಗಳೂರಿಗೆ ಬೆಳಗ್ಗೆ 11.20ಕ್ಕೆ ಹೊರಟು 12.30ಕ್ಕೆ ಮಂಗಳೂರು ತಲುಪಲಿದೆ. ಹಾಗೆಯೇ 12.55ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನವು 1.55ಕ್ಕೆ ಮೈಸೂರು ತಲುಪಲಿದೆ.ರಸ್ತೆ ಮಾರ್ಗದಲ್ಲಿ ತೆರಳುವುದಾದರೆ 255 ಕಿಲೋಮೀಟರ್ ಪ್ರಯಾಣವಿದ್ದು 6-7 ಗಂಟೆ ವರೆಗೆ ಕಾಲವಕಾಶ ತೆಗೆದು ಕೊಳ್ಳುವುದಲ್ಲದೆ ಮಡಿಕೇರಿ ಮೂಲಕ ಸಾಗುವುದಾದರೆ ಕಷ್ಟವಾಗುತ್ತದೆ. ಇಲ್ಲವೇ ಹಾಸನ ಮೂಲಕ ತೆರಳ ಬೇಕಾದರೂ ಕಡಿದಾದ ದಾರಿ ಇರುವುದರಿಂದ ಸಮಯ ಉಳಿಸುವ ನಿಟ್ಟಿನಲ್ಲಿ ಇದು ಉಪಯೋಗವಾಗಲಿದೆ.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಈ ನೂತನ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

error: Content is protected !!