fbpx

ಭೈರಪ್ಪನವರ ‘ಪರ್ವ’ ಕಾದಂಬರಿ ಆಧಾರಿತ ನಾಟಕ 21 ಸ್ಥಳಗಳಲ್ಲಿ ಪ್ರದರ್ಶನ: ಸಚಿವ ಸುನೀಲಕುಮಾರ್

ಬೆಳಗಾವಿ ಸುವರ್ಣಸೌಧ,ಡಿ.13(ಕರ್ನಾಟಕ ವಾರ್ತೆ): ಹೆಸರಾಂತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಪರ್ವ ಕಾದಂಬರಿ ಆಧಾರಿತ ನಾಟಕವನ್ನು ರಾಜ್ಯದಲ್ಲಿ 21 ಸ್ಥಳಗಳಲ್ಲಿ ಪ್ರದರ್ಶನ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲಕುಮಾರ್ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು. ಸದಸ್ಯ ಪಿ.ಆರ್.ರಮೇಶಕುಮಾರ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಪ್ರಕಾಶ ಬೆಳವಾಡಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಗುತ್ತಿದೆ. ಕಾದಂಬರಿಯಲ್ಲಿ ರಂಗಪಠ್ಯಕ್ಕೆ ಅಗತ್ಯವಾದ ಭಾಗಗಳನ್ನು ಮಾತ್ರ ಸಂಭಾಷಣೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಪರ್ವ ನಾಟಕದ ನಿರ್ದೇಶಕರು ರಂಗಪಠ್ಯವಾಗಿ ರೂಪಿಸಿದ ಸಂಭಾಷಣೆಗಳನ್ನು ಮಾತ್ರ ಪ್ರದರ್ಶನಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಕಾದಂಬರಿಯಲ್ಲಿ ಪ್ರಸ್ತಾಪಿಸಿದ ಸನಾತನ ಆಹಾರ ಪದ್ಧತಿಯನ್ನು ಸಾರ್ವಜನಿಕ ನಾಟಕಪ್ರದರ್ಶನದಲ್ಲಿ ಅಳವಡಿಸಿಕೊಳ್ಳಲಾಗಿದೆಯೇ ಎಂಬುದಕ್ಕೆ ಅವರು ಸ್ಪಷ್ಟಪಡಿಸಿದರು.

ಇಂಧನ ಇಲಾಖೆಯ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯೊಂದಿಗೆ ಶೀಘ್ರ ಸಭೆ ನಡೆಸಿ ವಿದ್ಯುತ್ ಉಪಕೇಂದ್ರಗಳ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ರಮವಹಿಸಲಾಗುವುದು ಎಂದು ಇಂಧನ ಸಚಿವರೂ ಆಗಿರುವ ಸುನೀಲಕುಮಾರ್ ಅವರು ಸದಸ್ಯ ಕೆ.ಪ್ರತಾಪಚಂದ್ರಶೆಟ್ಟಿ ಅವರು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು.

error: Content is protected !!