fbpx

ಭೂ ಕಂಪನದಿಂದ ಜನರಲ್ಲಿ ಆತಂಕ

ಇಂದು 1 ಗಂಟೆಯಿಂದ 1:40 ಗಂಟೆ ಅವಧಿಯಲ್ಲಿ ಸಂಪಾಜೆ, ಪೆರಾಜೆ, ಗೂನಡ್ಕ, ಕರಿಕೆ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಕಂಪನದ ಅನುಭವ ಆಗಿದೆ.
ದೊಡ್ಡ ಶಬ್ದ ಎರಡು ಬಾರಿಯೂ ಹೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

ಗುರುವಾರ ಸಂಪಾಜೆಯಲ್ಲಿ ರಿಕ್ಟರ್ ಮಾಪನ ಅಳವಡಿಸಲಾಗಿದ್ದು ಭೂಕಂಪದ ಪ್ರಮಾಣ ಸ್ಪಷ್ಟವಾಗಿ ಇನ್ನಷ್ಟೇ ತಿಳಿಯಬೇಕಾಗಿದೆ.
ಒಟ್ಟಿನಲ್ಲಿ ಕೊಡಗು, ದಕ್ಷಿಣ ಕನ್ನಡದಲ್ಲಿ ಆಗುತ್ತಿರುವ ಈ ಭೂಕಂಪನ ಭಯದ ವಾತಾವರಣ ಸೃಷ್ಟಯಾಗಿದ್ದು.
ಮಂಗಳೂರು ರಸ್ತೆಯ ತಾಳತ್ತಮನೆ ಭಾಗದಲ್ಲಿ ಅವೈಜ್ಞಾನಿಕವಾಗಿ ಬೆಟ್ಟ ಕೊರೆದ ಹಿನ್ನೆಲೆ ಬರೆಕುಸಿತ ಆಗುತ್ತಿದ್ದು. ಅಲ್ಲಲ್ಲಿ ಮರಗಳು ಧರೆಗುರುಳಿ ಸಂಚಾರ ವ್ಯವಸ್ಥೆ ಕಡಿತವಾಗಿದೆ.

ಬೆಳಿಗ್ಗೆ 10:50 ಗಂಟೆ ಸುಮಾರಿಗೆ ಚೆಂಬು, ಗೋನಡ್ಕ  ಗ್ರಾಮದ ಭಾಗದಲ್ಲಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಿನ್ನೆ ರಾತ್ರಿಯೂ ಎರಡು ಬಾರಿ ಭೂಮಿ ಕಂಪಿಸಿದ್ದು, ಈ ವಿಚಾರ ಜನರ ಚಿಂತೆಗೆ ಕಾರಣವಾಗಿದೆ.

error: Content is protected !!