ಭೂಗತ ಪಾತಕಿ ಮುತ್ತಪ್ಪ ರೈ ವಿಲ್ ಬರೆದಿದ್ದುದು ಯಾರಿಗೆಲ್ಲಾ…ಗೊತ್ತಾ!

ಭೂಗತ ಲೋಕದ ಮಾಜಿ ದೊರೆಯಾದ ಮುತ್ತಪ್ಪ ರೈ ಅವರು ಇತ್ತೀಚೆಗಷ್ಟೇ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟರು. ಇವರಿಗೆ ಇಬ್ಬರು ಹೆಂಡತಿಯರಿದ್ದು ಇಬ್ಬರು ಮಕ್ಕಳಿದ್ದಾರೆ. ಸಾಮಾನ್ಯವಾಗಿ ಆಸ್ತಿಯನ್ನು ಹೆಂಡತಿ ಮಕ್ಕಳ ಹೆಸರಿಗೆ ಬರೆಯಲಾಗುತ್ತದೆ. ಆದರೆ ಇಲ್ಲಿ ಮುತ್ತಪ್ಪ ರೈ ರವರು ಹೆಂಡತಿ ಮಕ್ಕಳಿಗೆ ಅಲ್ಲದೆ ಮನೆ ಕೆಲಸ ಮಾಡುವವರಿಗೂ ಕೂಡ ಆಸ್ತಿಯನ್ನು ಬರೆದು ಅಚ್ಚರಿಯನ್ನು ಮೂಡಿಸಿದ್ದಾರೆ.

ಇತ್ತೀಚೆಗೆ ಮುತ್ತಪ್ಪ ರೈ ಅವರು ಬರೆದಿಟ್ಟ ವಿಲ್ಲನ್ನು ಇದೀಗ ಓದಲಾಗಿದೆ. ಲಾಯರ್ ಈ ವಿಲ್ಲನ್ನು ಓದುವಾಗ ಎಲ್ಲರೂ ಆಶ್ಚರ್ಯ ಗೊಂಡಿದ್ದಾರೆ. ಮುತ್ತಪ್ಪ ರೈ ಅವರು ಸುಮಾರು 1500 ರಿಂದ 2 ಸಾವಿರ ಕೋಟಿಯಷ್ಟು ಚಿರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಈ ಎಲ್ಲ ಆಸ್ತಿಗಳನ್ನು ಹೆಂಡತಿ ಮಕ್ಕಳು ಮತ್ತು ಮನೆ ಕೆಲಸದವರಿಗೆ ಹಂಚಿದ್ದಾರೆ.

ಮುತ್ತಪ್ಪ ರೈಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ರಿಕ್ಕಿ ರೈ ಮತ್ತೊಬ್ಬ ರಾಖಿ ರೈ.ಮೊದಲ ಮಗ ರಾಖಿ ರೈ ಹೆಸರಿಗೆ ಮುತ್ತಪ್ಪ ರೈ ಅವರ ಎಲ್ಲ ಷೇರುಗಳು, ವ್ಯವಹಾರಗಳು, ಜೈ ಕರ್ನಾಟಕ ಸಂಘಟನೆ, ಬಂಟ್ವಾಳ, ಮಂಗಳೂರು, ಮೈಸೂರು, ಪುತ್ತೂರು, ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಇರುವ ಎಲ್ಲ ಜಮೀನುಗಳನ್ನು ಬರೆಯಲಾಗಿದೆ.

ಮತ್ತೊಬ್ಬ ಮಗ ರಿಕ್ಕಿ ಅವರಿಗೆ ಸದಾಶಿವನಗರದ ಮನೆ, ಬಿಡದಿಯಲ್ಲಿನ ಬಂಗಲೆ, ಯಲಹಂಕ ಮತ್ತು ದೇವನಹಳ್ಳಿಯಲ್ಲಿರುವ ಜಾಗ, ಅಲ್ಲದೆ ಸಕಲೇಶಪುರದಲ್ಲಿನ ನೂರ ಐವತ್ತುಕ್ಕೂ ಹೆಚ್ಚು ಕಾಫಿ ಎಸ್ಟೇಟ್ ನ್ನು ಬರೆಯಲಾಗಿದೆ.ಇನ್ನು ಎರಡನೇ ಹೆಂಡತಿ ಅನುರಾಧಾ ಅವರಿಗೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿರುವ ಆಸ್ತಿ, ಚಿನ್ನಾಭರಣ, ದುಬಾರಿ ಕಾರು, ಕೋಟ್ಯಂತರ ರೂಪಾಯಿ ಹಣವನ್ನು ಈಗಾಗಲೇ ಅಂದರೆ ಅವರಿದ್ದಾಗಲೇ ಕೊಟ್ಟಿದ್ದಾರೆ ಅಲ್ಲದೆ ಸಹಕಾರ ನಗರದಲ್ಲಿ ಎರಡಂತಸ್ತಿನ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ.

ಮುತ್ತಪ್ಪ ರೈ ರವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಇಪ್ಪತ್ತೈದು ಜನರ ಹೆಸರನ್ನು ತಮ್ಮ ವಿಲ್ನಲ್ಲಿ ಸೇರಿಸಿದ್ದಾರೆ. ಮುತ್ತಪ್ಪ ರೈ ರವರು ತಮ್ಮ ಆಸ್ತಿಯಲ್ಲಿ ಶೇ 20 ರಷ್ಟು ಆಸ್ತಿಯನ್ನು ಮನೆ ಕೆಲಸದವರಿಗೆ, ಚಾಲಕರಿಗೆ, ಗನ್ ಮ್ಯಾನ್ ಗಳಿಗೆ ಮತ್ತು ಆಪ್ತರಿಗೆ ಬರೆದಿದ್ದಾರೆ. ಮುತ್ತಪ್ಪ ರೈ ಅವರ ವಕೀಲರಾದ ನಾರಾಯಣಸ್ವಾಮಿ ರವರು ವಿಲ್ ಓದುತ್ತಿರುವಾಗ ವಿಲ್ಲಿನಲ್ಲಿ ಕೆಲಸದವರ ಹೆಸರು ಕೂಡ ಇರುವುದನ್ನು ಕೇಳಿ ಎಲ್ಲಾ ಕೆಲಸಗಾರರು ಮುತ್ತಪ್ಪ ರೈ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

error: Content is protected !!