fbpx

ಭೂಗತ ದೊರೆ ದಾವೂದ್ ಇಬ್ರಾಹಿಂ ಹೊಸ ತಂಡ ರಚನೆ!

ಭಾರತದ ರಾಜಕಾರಣಿಗಳು, ಉದ್ಯಮಿಗಳೇ ಮುಖ್ಯ ಟಾರ್ಗೆಟ್…

ನವದೆಹಲಿ: ಭಾರತದ ರಾಜಕಾರಣಿಗಳು ಮತ್ತು ಖ್ಯಾತ ಉದ್ಯಮಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಮುಂಬೈ ಸರಣಿ ಸ್ಫೋಟ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿ ಹೊಸ ತಂಡವೊಂದನ್ನು ರಚಿಸಿರುವುದಾಗಿ ಎನ್ ಐಎ ಬಯಲು ಮಾಡಿದೆ.

ದೇಶದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ವಿಶೇಷ ತಂಡ ಭಾರತದ ವಿವಿಧೆಡೆ ಸ್ಫೋಟಕ ಮತ್ತು ಲೆಥಾಲ್ ಶಸ್ತ್ರಾಸ್ತ್ರ ಬಳಸಿ ಹಿಂಸಾಚಾರ ಭುಗಿಲೇಳುವಂತೆ ಮಾಡುವ ಸಂಚು ರೂಪಿಸಿರುವುದಾಗಿ ವರದಿ ವಿವರಿಸಿದೆ.

ಇದನ್ನು ಹೊರತುಪಡಿಸಿ ದೆಹಲಿ ಮತ್ತು ಮುಂಬಯಿಯ ಮೇಲೆ ದಾವೂದ್ ಇಬ್ರಾಹಿಂ ಹೆಚ್ಚಿನ ಪ್ರಮಾಣದ ದಾಳಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ಎನ್ ಐಎ ತಿಳಿಸಿರುವುದಾಗಿ ವರದಿ ಹೇಳಿದೆ.

ಭಯೋತ್ಪಾದನಾ ಚಟುವಟಿಕೆಗೆ ಆರ್ಥಿಕ ನೆರವು ನೀಡುವಲ್ಲಿ ಶಾಮೀಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ವಿರುದ್ಧ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕಾರ್ ಹಾಗೂ ಆತನ ಸಹಚರರನ್ನು ವಿಚಾರಣೆಗೊಳಪಡಿಸಿದೆ ಎಂದು ವರದಿ ವಿವರಿಸಿದೆ.

error: Content is protected !!