ಭುವನಂ ಫೌಂಡೇಶನ್ನಿಂದ ಕಿಟ್ ವಿತರಣೆ

ಯುವ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ನೇತೃತ್ವದ ಭುವನಂ ಫೌಂಡೇಶನ್ ನಿಂದ ಪೊನ್ನಂಪೇಟೆಯ ಕಿರಗೂರು ಹಾಗೂ ಮತ್ತೂರು ಗ್ರಾಮದಲ್ಲಿ ಸೀಲ್ ಡೌನ್ ಆದಂತ ಪ್ರದೇಶಗಳಿಗೆ ಕಿಟ್ಟನ್ನು ವಿತರಿಸಲಾಯಿತು.


ಕೊಡಗು ಯುವಸೇನೆಯ ಮನವಿಯ ಮೇರೆಗೆ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಸೀಲ್ ಡೌನ್ ಆದ 15 ಪ್ರದೇಶಗಳಿಗೆ ಕಿಟ್ಟನ್ನು ವಿತರಿಸಿ ನೊಂದವರಿಗೆ ಧೈರ್ಯವನ್ನು ಹೇಳಿದರು ಕೊಡಗನ್ನು ಕೊರೊನ ಮುಕ್ತ ಮಾಡಲು ಎಲ್ಲರೂ ಪಣ ತೊಡೋಣ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕೊಡಗು ಯುವಸೇನೆಯ ಮುಖ್ಯಸ್ಥ ಕುಲದೀಪ್ ಪುಣಚ ಹಾಗೂ ಪೊಕ್ಕಳಿಚಂಡ ಪುರುಷೋತ್ತಮ್ ಹಾಜರಿದ್ದರು.ಗ್ರಾಮಸ್ಥರು ಹಾಗೂ ಕೊಡುಗು ಯುವಸೇನೆ ಭುವನಂ ತಂಡಕ್ಕೆ ಧನ್ಯವಾದಗಳು ಸಮರ್ಪಿಸಿದರು.