ಭಾರೀ ಪ್ಲಾನ್ ಮಾಡಿದ್ದ ಸಿ.ಡಿ ಕಿಂಗ್ ಪಿನ್:ಕೊಡಗಿನಲ್ಲಿ ಜಮೀನು ಖರೀದಿಸುವ ಯೋಜನೆ ಹಾಕಿಕೊಂಡಿದ್ದ!

ಕೊಡಗು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ಕಿಂಗ್ ಪಿನ್ ಎನ್ನಲಾದ ತುಮಕೂರುವಿನ ಶಿರಾ ಮೂಲದ ಪತ್ರಕರ್ತ ರಮೇಶ್ ಜಾರಕಿಹೊಳಿ ಡೀಲ್ ಕನಡೆದರೆ ಐಷರಾಮಿ ಕಾರು,ಜಮೀನುಗಳನ್ನು ಪಡೆಯಲು ಸ್ಕೆಚ್ ಹಾಕಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಸಿಗುವ ಹಣದಲ್ಲಿ ಎರಡು ಐಶಾರಾಮಿ ಕಾರು ಖರೀದಿಸಲು ಮಹಿಂದ್ರಾ ಶೋರೂಂ ನಲ್ಲಿ ಒಂದು ಎಕ್ಸ್ ಯುವಿ-500 ಮತ್ತು ಥಾರ1 ಜೀಪ್ ಖರೀದಿಸಲು 1ಲಕ್ಷದ 75 ಸಾವಿರದಷ್ಟು ಮುಂಗಡ ಹಣ ನೀಡಿದ್ದ ಎನ್ನಲಾಗಿದೆಇದೇ ವ್ಯಕ್ತಿ ಫೆಬ್ರವರಿ 16ರಂದು ಪ್ಲಾನ್ ಬದಲಾಯಿಸಿ ವಾಹನದ ಬದಲು ಕೊಡಗಿನಲ್ಲಿ ಕಾಫಿ ತೋಟ ಖರೀದಿಗೆ ಓಡಾಟ ನಡೆಸಿದ್ದು ಮೈಸೂರು ಭಾಗದಲ್ಲೂ ಜಮೀನು ಪಡೆದುಕೊಳುವ ಯೋಜನೆ ಹಾಕಿಕೊಂಡಿದ್ದ ಎಂದು ಹೇಳಲಾಗುತ್ತಿದೆ.