fbpx

ಭಾರಿ ಮಳೆ, ತಂಪಾದ ಇಳೆ

ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಭಾರಿಗಿಂತ 20 ಇಂಚು ಅಧಿಕ ಮಳೆಯಾಗಿದೆ.

ಇಲ್ಲಿನ ತಲಕಾವೇರಿಯಲ್ಲಿ 152.6 ಇಂಚು ಮಳೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಭಾಗಮಂಡಲ, ಸಣ್ಣ ಪುಲಿಕೋಟು, ತಾವೂರು, ಅಯ್ಯಂಗೇರಿ, ಕೋರಂಗಾಲ ವ್ಯಾಪ್ತಿಯಲ್ಲಿ ಕಾಫಿ ಬೆಳೆ ನೆಲಕಚ್ಚಿದೆ.

ಫೆಬ್ರವರಿ ತಿಂಗಳಲ್ಲಿ ಸುರಿದ ಮಳೆಯಿಂದ ಉತ್ತಮ ಫಸಲನ್ನು ನಿರೀಕ್ಷಿಸಿದ್ದ ಬೆಳೆಗಾರರು ಬರಬರುತ್ತಾ ಜುಲೈ ತಿಂಗಳಿಂದ 105.5 ಇಂಚು ಮಳೆ ಹೆಚ್ಚಾದ ಪರಿಣಾಮ ಬೆಳೆಗಾರರು ತಲೆ ಮೇಲೆ ಕೈಗೆತ್ತಿ ಕುಳಿತಿದ್ದಾರೆ. ಕಳೆದ ವರ್ಷ ಇದೇ ಸಂದರ್ಭ 132.6 ಇಂಚು ಮಳೆಯಾಗಿತ್ತು.

error: Content is protected !!