ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ ಕೊಡಗಿನ ಬಾಸ್ಕೆಟ್ ಬಾಲ್ ಪ್ರತಿಭೆ

ಕೊಡಗಿನ ಮತ್ತೊಬ್ಬ ಕ್ರೀಡಾ ಪ್ರತಿಭೆ ಇದೀಗ ಬಾಸ್ಕೆಟ್ ಬಾಲ್ ಕ್ಷೇತ್ರದಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಗದ್ದೆಹಳ್ಳದ ಪಟ್ಟೆಮನೆ ಉದಯಕುಮಾರ್ ಮತ್ತು ಗಿರಿಜ ನಿವಾಸಿ ಪುತ್ರಿ ಏಕಲವ್ಯ ಪ್ರಶಸ್ತ್ತಿ ಪುರಸ್ಕೃತರಾಗಿರುವ ನವನೀತಾ ಫಿಬಾ ಏಷಿಯಾಕಪ್ ಮಹಿಳಾ ಬಾಸ್ಕೆಟ್ ಬಾಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಅಕ್ಟೋಬರ್ 27 ರಿಂದ ಮೂರು ದಿನಗಳ ಕಾಲ ಜೋರ್ಡಾನ್, ಅಮ್ಮಾನ್ ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು,ಮೊದಲ ದಿನ ಭಾರತ ತಂಡ ಜಪಾನ್ ದೇಶವನ್ನು ಎದುರಿಸಲಿದೆ.