fbpx

ಭಾರತೀಯ ಸ್ಕೌಟ್ಸ್ ಆಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಪೋಷಕರ ದಿನಾಚರಣೆ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಪೋಷಕರ ದಿನಾಚರಣೆಯನ್ನು ವರ್ಚು ವಲ್ಲಾಗಿ ಆಚರಿಸಲಾಯಿತು.

ಮೊದಲಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು. ಶ್ರೀಮತಿ ಮೈಥಿಲಿ ರಾವ್ ಇವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ನಾಲಕ್ಕು ದಿಕ್ಕುಗಳಿಂದ ಗೈಡ್ ವಿದ್ಯಾರ್ಥಿಗಳು ಶುಭ ಸಂದೇಶವನ್ನು ತರುವುದರ ಮೂಲಕ ಪೋಷಕ ರ ದಿನಾಚರಣೆಗೆ ಚಾಲನೆ ನೀಡಿದರು.
ಜಿಲ್ಲಾ ಪ್ರಧಾನ ಆಯುಕ್ತರಾದ ಶ್ರೀ ಕೆ ಟಿ ಬೇಬಿ ಮ್ಯಾಧ್ಯು ರವರು ಪೋಷಕರ ದಿನಾಚರಣೆಯನ್ನು ಶುಭಕೋರುವ ಮೂಲಕ ಉದ್ಘಾಟಿಸಿ ಪೋಷಕರ ದಿನಾಚರಣೆ ಯು ಬಹಳ ಅರ್ಥಪೂರ್ಣವಾದ ದಿನಾಚರಣೆಯಾಗಿದ್ದು ಇದನ್ನು ಆಚರಿಸಿರುವುದು ಬಹಳ ಸಂತೋಷವಾಗಿದೆ ಮಕ್ಕಳು ಪೋಷಕರ ಬಗ್ಗೆ ಕಾಳಜಿ ಇಟ್ಟುಕೊಂಡು ಅವರು ಹೇಳಿಕೊಟ್ಟಂತಹ ಮಾರ್ಗದಲ್ಲಿ ನಡೆದು ಅವರಿಗೆ ಗೌರವವನ್ನು ಕೊಟ್ಟು ಯಾವಾಗಲೂ ಅವರಿಗೆ ಚಿರಋಣಿಯಾಗಿರಬೇಕು ಎಂದು ನೋಡಿದರು.
ಈ ಕಾರ್ಯಕ್ರಮದಲ್ಲಿ ಗೈಡ್ ವಿಭಾಗದಲ್ಲಿ HWB ಆಗಿರುವ ಶ್ರೀಮತಿ ಸುಲೋಚನ ರವರು ಮಾತನಾಡುತ್ತಾ ಇಂದಿನ ಮಕ್ಕಳು ಪೋಷಕರು ಹೇಳಿಕೊಟ್ಟಂತಹ ಮಾರ್ಗದಲ್ಲಿ ನಡೆಯಬೇಕು ಮತ್ತು ಪೋಷಕರು ಕೂಡ ಮಕ್ಕಳಿಗೆ ಒಳ್ಳೆಯ ನೀತಿ ಮತ್ತು ಬದುಕುವ ರೀತಿ ಗಳನ್ನು ಹೇಳಿಕೊಡುವುದರ ಮೂಲಕ ಮಕ್ಕಳನ್ನು ಒಳ್ಳೆಯ ಪ್ರಜೆಯಾಗಿ ಬೆಳೆಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು ಪೋಷಕರ ದಿನಾಚರಣೆಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಹಮ್ಮಿಕೊಂಡಿರುವುದು ಬಹಳ ಉತ್ತಮ ಕಾರ್ಯಕ್ರಮವಾಗಿದೆ ಎಂದು ನೋಡಿದರು ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳೊಂದಿಗೆ ಪೋಷಕರು ಕೂಡ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದು ಬಹಳ ಸಂತೋಷವಾಗಿದೆ ಎಂದರು ಈ ಕಾರ್ಯಕ್ರಮದಲ್ಲಿ ಪೋಷಕರು, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅಲ್ಲದೆ ಸ್ಕೌಟ್ಸ್ ಗೈಡ್ಸ್ ಶಿಕ್ಷಕರನ್ನು ಒಳಗೊಂಡಂತೆ ಸುಮಾರು 70 ಜನರು ಭಾಗವಹಿಸಿದ್ದರು. ಪೋಷಕರು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು ಹಾಗೂ ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ವಾಮನನವರು ಉಪಸ್ಥಿತರಿದ್ದರು ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ಕೆ ಬಿ ಉಷಾರಾಣಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಜಿಲ್ಲಾ ಸಂಘಟಕರಾದ ಶ್ರೀಮತಿಯುಸಿ ದಮಯಂತಿ ಎಲ್ಲರನ್ನು ವಂದಿಸಿದರು

error: Content is protected !!