ಭಾರತೀಯ ಮಹಿಳೆಯರ ಹಾಕಿ ತಂಡಕ್ಕೆ ಕೊಡಗಿನ ಗೋಲ್ ಕೀಪರ್

ಕೊಡಗು ಮೂಲದ ತಡಿಯಪನ ಸುಚಿತ್ರ ಭಾರತೀಯ ಮಹಿಳೆಯರ ಹಾಕಿ ತಂಡಕ್ಕೆ ಗೋಲ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
ತಡಿಯಪನ ಚಂದ್ರಶೇಖರ್ ಪುತ್ರಿಯಾಗಿರುವ ಸುಚಿತ್ರ ಸದ್ಯಕ್ಕೆ ಮೈಸೂರಿನ ಟೆರೆಶಿಯನ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.