fbpx

ಭಾರತದ ರಾಜಕಾರಣದ ‘ಅಜಾತಶತ್ರು’ ಜನುಮ ದಿನ

ಮರೆತಿಲ್ಲ ಅವರ ಕೆಲಸಗಳನ್ನು ಜನ-ಮನ


-ರಜತ್ ರಾಜ್ ಡಿ.ಹೆಚ್, ಸಂಪಾದಕರು.

ಮೂರು ಬಾರಿ ದೇಶದ ಪ್ರಧಾನಿಗಳಾದ ಭಾರತ ರತ್ನ, ಪದ್ಮ ವಿಭೂಷಣ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಪಾರದರ್ಶಕ ಆಡಳಿತಗಾರ. ಅಳತೆ ಮೀರಿ ಆಡದೆ ರಾಜಕಾರಣವನ್ನು ಮಾಡಿದ ಚತುರ. ವಾಗ್ಝರಿಯಿಂದಲೇ ಕೇಳುಗರನ್ನು ಚಕಿತಗೊಳಿಸಿ, ಮಂತ್ರ ಮಗ್ಧವಾಗಿಸುತ್ತಿದ್ದ ಅದ್ಭುತ ವಾಗ್ಮಿ. ನಯವಿನಯದ ನಡೆ-ನುಡಿಯಿದ್ದ ‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ.

ಅಟಲ್ ಬಿಹಾರಿ ವಾಜಪೇಯಿ ಅವರು ಹುಟ್ಟಿದ್ದು ಇಂದು ಅಂದರೆ ಡಿಸೆಂಬರ್ 25 1924ರಂದು ಮಧ್ಯಪ್ರದೇಶದ ಗ್ವಾಲಿಯರ್ ಅಲ್ಲಿ.ಬಕೃಷ್ಣ ದೇವಿ ಹಾಗು ಕೃಷ್ಣ ಬಿಹಾರಿ ವಾಜಪೇಯಿ ದಂಪತಿಗಳ ಮಗನಾಗಿ ಜನಿಸಿದ ಅವರು ಶಿಕ್ಷಣವನ್ನು ರಾಜ್ಯ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮಾಡಿ ಮುಗಿಸಿದರು. ಅರ್ಯ ಸಮಾಜದ ಚಳುವಳಿಗಳಲ್ಲಿ ಪಾಲ್ಗೊಂಡು 1944ರಲ್ಲಿ ಅದರ ಪ್ರಧಾನ ಕಾರ್ಯದರ್ಶಿಗಳಾದರು. 1939ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಾಜಪೇಯಿ ಅವರು ಸೇರಿ, 1940-44ರ ಅವಧಿಯಲ್ಲಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು 1947ರ ಹೊತ್ತಿಗೆಲ್ಲಾ ಪ್ರಚಾರಕರಾದರು. ತದನಂತರ ವಿಸ್ತಾರಕರ ಜವಾಬ್ದಾರಿ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಉತ್ತರ ಪ್ರದೇಶಕ್ಕೆ ಕಳುಹಿಸಿತು. ಹಾಗೆ ಹೋದ ಅವರು ಕರ್ತವ್ಯ ನಿರ್ವಹಿಸುತ್ತಲೇ ದೀನ್ ದಯಾಳ್ ಉಪಾಧ್ಯಾಯ ಅವರ ಮಾಸಿಕ ಪತ್ರಿಕೆಯಾಗಿದ್ದ ರಾಷ್ಟ್ರ ಧರ್ಮ, ಬೇರೆ ಪತ್ರಿಕೆಗಳಾದ ಪಂಚಜನ್ಯ, ಸ್ವದೇಶ್ ಹಾಗು ವೀರ್ ಅರ್ಜುನ್ ಎಂಬ ದೈನಿಕ ಪತ್ರಿಕೆಗೂ ಸೇವೆ ಸಲ್ಲಿಸಿದರು.

16 ವರ್ಷಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮಾನ್ಯ ಸ್ವಯಂ ಸೇವಕರಾಗಿ ಸೇರಿ, ಹಂತ ಹಂತವಾಗಿ ಬೆಳೆದು ಸಂಸತ್ತಿಗೆ ಪ್ರಥಮ ಬಾರಿಗೆ 1957ರಲ್ಲಿ ಗೆದ್ದು ಪ್ರವೇಶಿಸಿದರು. ಭಾರತೀಯ ಜನ ಸಂಘದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಆಗಿನ್ನೂ 1977ರಲ್ಲಿ ಭಾರತೀಯ ಜನ ಸಂಘವು ಮೊರಾರ್ಜಿ ದೇಸಾಯಿ ಅವರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(೦), ಹಾಗು ಚರಣ್ ಸಿಂಗ್ ಅವರ ಭಾರತೀಯ ಲೋಕದಳ ಜೊತೆಗೆ ವಿಲೀನಗೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಯಿತು.

ಭಾರತೀಯ ಜನತಾ ಪಕ್ಷವು ಹಾಗೆ ಸ್ಥಾಪನೆಯಾದ ಮೇಲೆ ಅದನ್ನು ಕಟ್ಟಿ ಬೆಳೆಸಲು ತಳಮಟ್ಟದಿಂದಲೇ ಶ್ರಮಿಸಿದ್ದವರಲ್ಲಿ ವಾಜಪೇಯಿ ಅವರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಬಿಜೆಪಿಯ ಮೊದಲ ಅಧ್ಯಕ್ಷರಾಗಿ ಒಮ್ಮತದಿಂದ ಆಯ್ಕೆಯಾದ ಅವರು ಹಗಲು ರಾತ್ರಿ ಎನ್ನದೆ ಪಕ್ಷ ಸಂಘಟನೆಗೆ ಶ್ರಮಿಸಿದರು. ಅದಕ್ಕೂ ಮುನ್ನ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾದಾಗ ವಿದೇಶಾಂಗ ಸಚಿವರಾಗಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಉತ್ತಮ ಕೆಲಸ ಕಾರ್ಯ ಮಾಡಿದರು. ಯುನೈಟೆಡ್ ನೇಷನ್ಸ್ ಜೆನರಲ್ ಅಸೆಂಬ್ಲಿಯಲ್ಲಿ 1977ರಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿ ಪ್ರಥಮ ಎನಿಸಿಕೊಂಡರು.

ಬಿಜೆಪಿ ಸ್ಥಾಪನೆ ಆದ ಸಮಯದಲ್ಲೇ ಅಂಗರಕ್ಷಕನೊಬ್ಬನಿಂದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಗುಂಡೇಟಿನಿಂದ ಸಾವನ್ನಪ್ಪಿದ್ದರು‌. ಅದು ಇಂದಿರಾ ಕಾಂಗ್ರೆಸ್ ಕುರಿತು ಜನರಲ್ಲಿ ಬಹಳ soft corner ಮೂಡಲು ಕಾರಣವಾಗಿತ್ತು. ಹಾಗಾಗಿ ಕಾಂಗ್ರೆಸ್ ಆ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಬಿಜೆಪಿ ಕೇವಲ 2 ಸ್ಥಾನವನ್ನು ಗೆದ್ದು ಲೋಕಸಭೆಯಲ್ಲಿ ಆರಂಭದ ಹೆಜ್ಜೆ ಇಟ್ಟಿತು‌. ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಟ್ಟರು. ಅಟಲ್ ಜೀ ಎದೆಗುಂದದೆ ಶ್ರಮವಹಿಸಿ, ಪಕ್ಷ ಕಟ್ಟಲು ದುಡಿದರು. ಆಗಲು ಧೃತಿಗೆಡದೆ, 'ಅಂಧಕಾರವು ಅಳಿಯುತ್ತದೆ ಬೆಳಕು ಹರಿಯುತ್ತದೆ ಕಮಲ ಅರಳುತ್ತದೆ.'

ಎಂದು ಹೇಳಿ ಭಾಷಣವೊಂದರಲ್ಲಿ ಭವಿಷ್ಯ ಭರವಸೆಯಿಂದ ನುಡಿದಿದ್ದರು. ಅವರು ಮಧ್ಯಪ್ರದೇಶದಿಂದ ರಾಜ್ಯ ಸಭಾ ಸದಸ್ಯರಾಗಿಯೂ ಚುನಾಯಿತರಾದರು. ಆಗ 1986ರಲ್ಲಿ ಎಲ್.ಕೆ ಅಡ್ವಾಣಿ ಅವರು ಬಿಜೆಪಿಯ ಅಧ್ಯಕ್ಷರಾದರು.

1995, ನವೆಂಬರ್ ತಿಂಗಳಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಎಲ್.ಕೆ ಅಡ್ವಾಣಿ ಅವರು ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ವಾಜಪೇಯಿ ಅವರ ಹೆಸರನ್ನು ಘೋಷಿಸಿದರು. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು 16 ದಿನಗಳ ಕಾಲವಷ್ಟೇ ಪ್ರಧಾನಿಯಾಗಿ ಉಳಿದರು. ಬಹುಮತದ ಕೊರತೆಯಿಂದ ಸರಕಾರದ ಪಥನವಾಯಿತು. ನಂತರ ಪುನಃ 1998ರಿಂದ 1999ರವರೆಗೆ ಸುಮಾರು 13 ತಿಂಗಳ ಕಾಲ ಆಡಳಿತ ನಡೆಸಿದ ಅವರಿಗೆ ಆಡಳಿತದ ಹಿಡಿತ ಸಿಗುತ್ತಿರುವಷ್ಟರಲ್ಲೇ ತಪ್ಪಿ ಹೋಗಿತ್ತು. 1990ರಲ್ಲಿ ಅಧಿಕಾರಕ್ಕೆರಲು ಬಿಜೆಪಿ ಯಶಸ್ವಿಯಾಗಿ ಪೂರ್ಣಾವಧಿಯನ್ನು ಮುಗಿಸಿತ್ತು. ಪ್ರಧಾನಿಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಇಂದಿಗೂ ಮರೆಯದಂತಹ ನಾಯಕರಾಗಿ ಬೆಳೆದರು. ಅವರು ಮಾಡಿದ ಕೆಲಸಗಳಲ್ಲಿ ಗಮನಾರ್ಹ ಸಾಧನೆಗಳೆಂದು ಗುರುತಿಸುವುದಾದರೆ ಅವು:

ರಸ್ತೆಗಳ ಅಭಿವೃದ್ಧಿ:

ಭಾರತದ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದ ಅವರು ‘The Golden ೞುಅದ್ರಿಲತೆರಲ್’ ಎಂಬ ಹೆಸರಿನ ಯೋಜನೆ ಆರಂಭಿಸಿದರು. ಅದರಲ್ಲಿ ಚತುಷ್ಪತ ಹೆದ್ದಾರಿಯನ್ನು ಸುಸಜ್ಜಿತವಾಗಿ ನಿರ್ಮಿಸುವ ಯೋಜನೆ ಇತ್ತು. ಅಂತೆಯೇ ಭಾರತದ ಪ್ರಮುಖ ನಗರಗಳಾಗಿದ್ದ ಕೊಲ್ಕೊತ್ತಾ, ಚೆನೈ, ಮುಂಬೈ ನಗರಗಳಿಗೆ ಸಂಪರ್ಕ ಕಲ್ಪಸುವ ಸುಸಜ್ಜಿತ ಹೆದ್ದಾರಿಗಳ ಕಾರ್ಯ ಶುರು ಮಾಡಿದರು. 1999ರಲ್ಲಿ ಅಟಲ್ ಜೀ ಅವರು ಪ್ರಧಾನಿಯಾದಾಗ ಶುರುವಾದ ಈ 600 ಬಿಲಿಯನ್ ರೂಪಾಯಿ ವೆಚ್ಚದ ಮಹತ್ವಾಕಾಂಶಿ ಯೋಜನೆಯು ಒಟ್ಟು 5,846 ಕಿಲೋ ಮೀಟರ್ ಗಳ ರಸ್ತೆ ಸಂಪರ್ಕದ ಗುರಿ ಹೊಂದಿತ್ತು. 2006ರಲ್ಲಿ ಈ ಯೋಜನೆ ಪೂರ್ಣಗೊಳ್ಳುವುದೆಂದು ಅಂದಾಜಿಸಲಾಗಿತ್ತು. ಆದರೆ ಹಲವಾರು ಅಡೆ ತಡೆ ತೊಂದರೆಗಳಿಂದ ವಿಳಂಬಗೊಂಡು ಜನವರಿ 2012ರಂದು ಪೂರ್ಣಗೊಂಡಿತು. ದೇಶದ ವಿವಿಧ ರಾಜ್ಯಗಳ ಹೆದ್ದಾರಿಗಳನ್ನು ನಿರ್ಮಿಸಿ ದೇಶದ ನರನಾಡಿಯಂತೆ ಸಹಾಯಕವಾಗಯವ ಸಂಚಾರ-ಸಾಗಾಟದ ವ್ಯವಸ್ಥೆಗೆ ಹೆದ್ದಾರಿಗಳನ್ನು ನಿರ್ಮಿಸಿ ಅಭಿವೃದ್ಧಿಗೆ ಹೊಸದೊಂದು ಮುನ್ನುಡಿ ಬರೆದರು.

ಕಂಪೆನಿಗಳ ಖಾಸಗಿಕರಣ:

ವಿ.ಎಸ್.ಎನ್.ಎಲ್, ಬಾಲ್ಕೋ ಇಂಡಿಯನ್ ಪೆಟ್ರೋ ಕೆಮಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಕಂಪೆನಿಗಳನ್ನು ಖಾಸಗೀಕರಣಗೊಳಿಸಲಾಯಿತು. ಆ ಮೂಲಕ ಅವುಗಳನ್ನು ಪ್ರಗತಿಯ ಪಥಕ್ಕೆ ತರುವ ಯತ್ನ ಮಾಡಿದರು.

ಶಿಕ್ಷಣವನ್ನು ಮೂಲ ಭೂತ ಹಕ್ಕಾಗಿಸಿದರು

ಸರ್ವ ಶಿಕ್ಷಣ ಅಭಿಯಾನವನ್ನು ಆರಂಭಿಸಿ 6-14 ವಯಸ್ಸಿನ ಮಕ್ಕಳಿಗೆ ಶಿಕ್ಷಣವು ಮೂಲಭೂತ ಹಕ್ಕು ಎಂದು ಘೋಷಿಸಿದರು. ಅದರ ಅನುಸಾರ ಉಚಿತ ಹಾಗು ಖಡ್ಡಾಯ ಶಿಕ್ಷಣವನ್ನು 6 ರಿಂದ 14ರ ವಯೋಮಾನದ ಮಕ್ಕಳು ಪಡೆಯಲು ಸರಕಾರ ಪ್ರೋತ್ಸಾಹಿಸಿತು.

ಪೋಕ್ರಾನ್ ನಲ್ಲಿ ಅಣು ಪರೀಕ್ಷೆ-ಆಪರೇಷನ್ ಶಕ್ತಿ

1998ರಲ್ಲಿ ಪೋಕ್ರಾನ್ ಅಲ್ಲಿ ಐದು ಅಣು ಪರೀಕ್ಷೆಯನ್ನು ವಿಶ್ವದ ಹಲವು ದೇಶಗಳ ವಿರೋಧ ಇದ್ದರೂ ಕೂಡ ಮಾಡಿದರು. ವೈರಿ ರಾಷ್ಟ್ರಗಳಿಗೆ ಇದರಿಂದ ಸ್ಪಷ್ಟ ಸಂದೇಶವನ್ನು ರವಾನಿಸಲಾಯಿತು.

ಹೊಸ ಟೆಲಿಕಾಂ ನೀತಿ ಜಾರಿಗೊಳಿಸಲಾಯಿತು

ಅಟಲ್ ಜೀ ಸರಕಾರ ಜಾರಿಗೊಳಿಸಿದ ಹೊಸ ಟೆಲಿಕಾಂ ನೀತಿಯಿಂದಾಗಿ 3% ಬೆಳವಣಿಗೆಯು 12 ವರ್ಷಗಳಲ್ಲಿ 70%ನಷ್ಟು ಹೆಚ್ಚಾಯಿತು.

ಪ್ರಪ್ರಥಮ ಮೆಟ್ರೋ ಯೋಜನೆ ಆರಂಭ

ದೆಹೆಲಿಯ ಕಾಶ್ಮೀರಿ ಗೇಟ್ ಇಂದ ಸೀಲಂಪುರ್ ತನಕ ಪ್ರಪ್ರಥಮ ಮೆಟ್ರೋ ಯೋಜನೆಯನ್ನು ಎನ್.ಡಿ.ಎ ಸರಕಾರ ಆರಂಭಿಸಿತು.

‘Look East’ ನೀತಿಯ ಜಾರಿ

ಪೂರ್ವದ ರಾಷ್ಟ್ರಗಳಾದ ಚೀನಾ, ಇಸ್ರೇಲ್, ಯು.ಎಸ್.ಎ ಪಾಕಿಸ್ತಾನದ ಜೊತೆಗೆ ವಿದೇಶಾಂಗ ಸಂಬಂಧವನ್ನು ಬಿಗಿಯಾಗಿ ಬೆಸೆಯಲು ಪ್ರಯತ್ನಿಸಿದರು.

ಚಂದ್ರಯಾನ ಯೋಜನೆ

ವಿಜ್ಞಾನದ ವಿಕಾಸಕ್ಕೆ ಮತ್ತೂ ಗಮನ ಹರಿಸಿ, ಚಂದ್ರಯಾನ 1st ಯೋಜನೆಯು 15, ಆಕ್ಟೋಬರ್ 2003ರಂದು ಹಾಕಿಕೊಂಡಿತು. ಅದಕ್ಕಾಗಿ ಹಣಕಾಸಿನ ಜವಾಬ್ದಾರಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

ಸಂಸತ್ತಿನಲ್ಲಿ ಸದಸ್ಯರಾಗಿ ಐದು ದಶಕಗಳ ಕಾಲ ಇದ್ದು, ಲೋಕಸಭೆಯಿಂದ ಹತ್ತು ಬಾರಿ ಹಾಗು ರಾಜ್ಯ ಸಭೆಯಿಂದ ಎರಡು ಬಾರಿ ಚುನಾಯಿತರಾಗಿದ್ದರು. ಮೂರು ಬಾರಿ ದೇಶದ ಪ್ರಧಾನಮಂತ್ರಿಗಳಾಗಿ 6 ವರ್ಷ 1 ತಿಂಗಳು 13 ದಿನಗಳ ಕಾಲ ಸೇವೆ ಸಲ್ಲಿಸಿದ್ದ ಅಟಲ್ ಬಿಹಾರಿ ವಾಜಪೇಯ್ ಅವರು ದೇಶದ ಪ್ರಜೆಗಳು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸಗಳನ್ನು ಮಾಡಿ ಅಜಾತಶತ್ರು ಅಮರರಾದರು.

error: Content is protected !!