fbpx

ಭಾರತದ ಬೆಂಬಲಕ್ಕೆ ನಿಲ್ಲಲಿವೆಯೇ ದೊಡ್ಡಣ್ಣ ಹಾಗು ಸಹೋದರ ರಾಷ್ಟ್ರಗಳು…

ಭಾರತ ತನ್ನ ಅಂತರಾಷ್ಟ್ರೀಯ ಸಂಬಂಧಗಳನ್ನು ನರೇಂದ್ರ ಮೋದಿ ಅವರು ಪ್ರಧಾನಿಗಳಾದ ಮೇಲೆ ವೃದ್ಧಸಿತ್ತು. ಅದರಲ್ಲೂ ಅಮೇರಿಕಾ, ಇಸ್ರೇಲ್ ಜೊತೆಗಿನ ಬಾಂಧವ್ಯವಂತೂ ಅತೀವವಾಗಿ ಆತ್ಮೀಯವಾಗಿತ್ತು.


ಇತ್ತೀಚೆಗೆ ಭಾರತದ 20 ಸೈನಿಕರು ಚೀನಾದ ದಾಳಿಯಿಂದ ಗಲ್ವಾನ್ ಪ್ರಾಂತ್ಯದಲ್ಲಿ ಅಮರರಾದರೂ ಅಮೇರಿಕಾ, ಇಸ್ರೇಲ್ ಈ ಕುರಿತು ಪ್ರತಿಕ್ರಿಯಿಸಿರಲಿಲ್ಲ. ನಂತರ ಟ್ವಿಟರ್ ಅಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗು ಅವರ ಮಗಳು ಹಾಗೆಯೇ ಸಲಹೆಗಾರರಾದ ಇವಾಕ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆನ್ಜಮಿನ್ ನೇತನ್ಯಾಹು, ಜಪಾನಿನ ಪ್ರಧಾನಿ ಶಿನೋ಼ ಅಬೆ ಅವರು ‘We Stand With India’ ಎಂದು ಟ್ವೀಟ್ ಮಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡಿ ಸಂಚಲನವನ್ನೇ ಮೂಡಿಸಿತ್ತು.


ಆದರೀಗ ಅವುಗಳೆಲ್ಲಾ ಅಧಿಕೃತ ಸಂದೇಶಗಳಲ್ಲ. ಅವರದೇ ಹೆಸರುಗಳಲ್ಲಿ ಇರುವ ನಕಲಿ ಖಾತೆಯಿಂದ ಈ ಸಂದೇಶ ಬಂದಿದೆ ಎಂದು ತಿಳಿದು ಬಂದಿದೆ. ವೈಟ್ ಹೌಸ್ ಕೂಡ ‘ಅಮೇರಿಕಾ ಲಡಾಕ್ ಅಲ್ಲಿ ನಡೆಯುತ್ತಿರುವ ಭಾರತ-ಚೀನಾ ನಡುವಣ ನಡೆಯುತ್ತಿರುವ ಸಂಘರ್ಷವನ್ನು ಗಮನಿಸುತ್ತಿದೆ. ಆದರೆ ಅದರಲ್ಲಿ ಅಮೇರಿಕಾ ಮೂಗು ತೂರಿಸುವ ಅಥವಾ ಮಧ್ಯ ಪ್ರವೇಶಿಸುವ ಯಾವುದೇ ಅಧಿಕೃತ ಆಲೋಚನೆಗಳನ್ನೂ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.


ಇದು ನಿಜಕ್ಕೂ ಬೇಸರದ ಸಂಗತಿ. ಪರಸ್ಪರ ಎಷ್ಟೋ ಒಪ್ಪಂದಗಳನ್ನು ಮಾಡಿಕೊಂಡು, ಕೂಡ ಮಿತ್ರ ರಾಷ್ಟ್ರಗಳು ಭಾರತಕ್ಕೆ ತಮ್ಮ ಬೆಂಬಲವನ್ನು ಈವರೆಗೆ ನೀಡದಿರುವುದು ಬೇಸರದ ವಿಚಾರ.

error: Content is protected !!