ಭಾರತಕ್ಕೆ ನೆರವು ನೀಡಲು ಸಿದ್ಧ: ಇಮ್ರಾನ್!

ಇಸ್ಲಾಮಾಬಾದ್, ಏ.25- ಮಾರಕ ಕೊರೊನಾ ಸೋಂಕು ಎದುರಿಸಲು ಭಾರತಕ್ಕೆ ಸಾಧ್ಯವಾದಷ್ಟು ನೆರವು ನೀಡಲು ಪಾಕಿಸ್ತಾನ ಸಿದ್ಧ ಎಂದು ಹೇಳಿದೆ. ಪರಸ್ಪರ ಸಹಕಾರ ನೀಡುವ ನಿಟ್ಟಿನಲ್ಲಿ ನಾವು ಮಾನವೀಯತೆ ಮೆರೆಯಬೇಕಾಗಿದೆ ಎಂದು ಇಸ್ಲಮಾಬಾದ್‍ನ ವಿದೇಶಾಂಗ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ತ್ವರಿತವಾಗಿ ನಿರ್ದಿಷ್ಟ ವಸ್ತುಗಳು ಹಾಗೂ ವೆಂಟಿಲೇಟರ್‍ಗಳನ್ನು ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.ಭಾರತದ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ವೆಂಟಿಲೇಟರ್‍ಗಳು, ಪಿಎಪಿ, ಡಿಜಿಟಲ್ ಎಕ್ಸರೆ ಯಂತ್ರಗಳು, ಪಿಪಿಇಗಳು ಮತ್ತಿತರ ವಸ್ತುಗಳನ್ನು ಭಾರತಕ್ಕೆ ಪರಿಹಾರದ ರೂಪದಲ್ಲಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ತ್ವರಿತವಾಗಿ ತಲುಪಿಸಲು ಕೂಡ ಈಗಾಗಲೇ ರಾಜತಾಂತ್ರಿಕ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.ಒಗ್ಗಟ್ಟಾಗಿ ನಾವು ಈ ಮಹಾಮಾರಿಯನ್ನು ಹೋಗಲಾಡಿಸಬೇಕಾಗಿದೆ.

ಶೀಘ್ರವೇ ಇದು ಪರಿಹಾರಗೊಳ್ಳಲಿ. ನೆರೆಹೊರೆ ರಾಷ್ಟ್ರಗಳು ಈ ಸೋಂಕಿನಿಂದ ಪರಿಹಾರ ಕಂಡುಕೊಳ್ಳಲಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

error: Content is protected !!