|ಭಾಗಮಂಡಲ ದೇವಾಲಯದ ಸಿಬ್ಬಂದಿಗಳ ಕೋವಿಡ್ ಪರೀಕ್ಷೆ – ನೆಗೆಟಿವ್ ವರದಿ|ಮಾರ್ಚ್ ಅಂತ್ಯದವರೆಗೆ ದೇವಸ್ಥಾನ ಬಂದ್|

ಕೊಡಗು:ಕಳೆದ ಬುಧವಾರ ಜೀವನದಿ ಕಾವೇರಿ ತಪ್ಪಲಿನಲ್ಲಿರುವ ಪವಿತ್ರ ಭಗಂಡೇಶ್ವರ ದೇವಾಲಯದ ಓರ್ವ ಸಿಬ್ಬಂದಿಗೆ ಕೋರೋನ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ದೇವಾಲಯದ ಎಲ್ಲಾ 29 ಸಿಬ್ಬಂದಿಗಳ ಪರೀಕ್ಷೆ ನಡೆಸಲಾಗಿತ್ತು.
ಇದೀಗ ಪರೀಕ್ಷಾ ವರದಿ ಲಭಿಸಿದ್ದು 29 ಸಿಬ್ಬಂದಿಗಳ ಪೈಕಿ ಯಾರಿಗೂ ಸೋಂಕು ಇಲ್ಲ ಧೃಡಪಟ್ಟಿದೆ.
ಈ ನಡುವೆ ಮಾರ್ಚ್ 30 ರವರೆಗೆ ಭಾಗಮಂಡಲ ದೇವಾಲಯ ಬಂದ್ ಮಾಡುವಂತೆ ಜಿಲ್ಲಾಧಿಕಾರಿಯವರ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರ ಆದೇಶದಂತೆ ಶ್ರೀ ಭಗಂಡೆeಶ್ವರ ದೇವಾಲಯವನ್ನು ಮುಚ್ಚಲಾಗಿದೆ.
ಆದುದರಿಂದ ಸಾರ್ವಜನಿಕ ಭಕ್ತಾದಿಗಳು ಸಹಕರಿಸಬೇಕಾಗಿ ವಿನಂತಿ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಕೋರಿದ್ದಾರೆ.

ಇನ್ನು ತ್ರಿವೇಣಿ ಸಂಗಮದಲ್ಲಿ ಹಿಂದೆ ಇದ್ದ ಪಿಂಡ ಪ್ರಧಾನ ಜೊತೆ ಪುಣ್ಯ ಸ್ನಾನಕ್ಕೆ ಇದ್ದ ನಿರ್ಬಂಧ ಹೇರಿ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.