ಭಾಗಮಂಡಲ ಜೇನು ಸಂಸ್ಕರಣ ಘಟಕಕ್ಕೆ ಡಿಸಿ ಭೇಟಿ

ಕೊಡಗಿನ ಜೇನು ತುಪ್ಪವನ್ನು ಹೊರ ರಾಜ್ಯದಿಂದ ಭಾಗಮಂಡಲಕ್ಕೆ ಸರಬರಾಜು ಮಾಡಿ ಕೂರ್ಗ್ ಹನಿ ಬ್ರಾಂಡ್ ಹೆಸರಿನಲ್ಲಿ ನಕಲಿ ಬ್ರಾಂಡ್ ಮಾಡಲಾಗುತ್ತಿದೆ ಎನ್ನುವ ಆರೋಪ ಮತ್ತು ಇತ್ತೀಚೆಗೆ ಬೋಯಿಕೇರಿ ಬಳಿ ನಡೆದ ತಮಿಳುನಾಡಿನ ಲಾರಿ ಅಪಘಾತದಲ್ಲಿ ಬ್ಯಾರೆಲ್ ಗಟ್ಟಲೆ ಜೇನು ತುಪ್ಪ ಇದ್ದದ್ದು ಕೊಡಗಿನ ಜೇನು ಬ್ರಾಂಡ್ ಮಾಡುತ್ತಿದ್ದಾರೆ ಎನ್ನುವ ಆರೋಪದ ಹಿನ್ನಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.