ಭಾಗಮಂಡಲದಲ್ಲಿ ಅದ್ದೂರಿ ಆಟಿ 18 ಆಚರಣೆ

ಕೊಡಗಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಆಟಿ 18ರ ಆಚರಣೆ ಭಾಗಮಂಡಲದಲ್ಲಿ ಅದ್ದೂರಿಯಾಗಿ ನೆರವೇರಿತು.



ಇಲ್ಲಿನ ಗೌಡ ಸಮಾಜದಲ್ಲಿ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಆಯೋಜಿಸಿದ್ದ ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಆಟಿ 18 ರ ವಿಶೇಷತೆ, ಸೊಪ್ಪುಗಳ 18 ಗುಣಗಳ ಮಹತ್ವ,ಆಹಾರ ಪದ್ದತಿಗಳ ಮಹತ್ವವನ್ನು ತಿಳಿಸಿದರು. ಇದೇ ವೇಳೆ ಸುತ್ತಮುತ್ಲಿನ ಗ್ರಾಮಸ್ಥರು ತಯೋರಿಸಿದ್ದ ನಾಟಿಕೋಳಿ ಸಾರು, ಅನ್ನ, ಆಟಿ ಪಾಯಸ, ಕಣಿಲೆ ಖಾದ್ಯಗಳನ್ನು ಮದ್ಯಾಹ್ನದ ಊಟಕ್ಕೆ ನೀಡಲಾಯಿತು.