ಭವಿಷ್ಯದ ವೈದ್ಯರ ಮೋಜು ಮಸ್ತಿ; ಗ್ರಾಮಸ್ಥರಿಂದ ತರಾಟೆ!

ಕೊಡಗು: ದೇಶಕ್ಕೆ ದೇಶವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ, ನಿಯಂತ್ರಣಕ್ಕೆ ತರಲು ಲಾಕ್ ಡೌನ್ ಮಾಡಿಕೊಂಡಿರುವ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಭವಿಷ್ಯದಲ್ಲಿ ವೈದ್ಯರಾಗಬೇಕಾದ ವಿದ್ಯಾರ್ಥಿಗಳು ಜಾಲಿ ರೈಡ್ ಮಾಡುವಲ್ಲಿ ಬ್ಯುಸಿ ಆಗಿದ್ದರು.ಅಭಿಫಾಲ್ಸ್ ರಸ್ತೆಯಲ್ಲಿರುವ ವೈದಕೀಯ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಮಡಿಕೇರಿ ನಗರದ ಒಳಗೆ ಓಡಾಡಲು ಸಂಪೂರ್ಣ ನಿಷೇಧ ಹೇರಿದ್ದರಿಂದ ತಮ್ಮ ತಮ್ಮ ಐಷರಾಮಿ ಬೈಕ್ ಹತ್ತಿ ಮಾಂದಲ್ಪಟ್ಟಿ ಕಡಗೆ ತೆರಳಲು ಪ್ಲಾನ್ ಹಾಕಿಕೊಂಡಿದ್ದರು.

ಗ್ರಾಮಾಂತರ ಪ್ರದೇಶದಲ್ಲಿ ತಮ್ಮನ್ನು ಯಾರು ತಡೆಯುವುದಿಲ್ಲ ಎಂದುಕೊಂಡ ಈ ವಿದ್ಯಾರ್ಥಿಗಳು ನಿರ್ಜನ ಪ್ರದೇಶಗಳಲ್ಲಿ ಬೈಕ್ ನಿಲ್ಲಿಸಿ, ಮೂಜು ಮಾಡುತ್ತಿದ್ರು. ಇದನ್ನು ಅರಿತ ದೇವಸ್ಥೂರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ, ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ ಮೆಡಿಕಲ್ ವಿದ್ಯಾರ್ಥಿಗಳೇ ಕೊರೊನಾ ಎಚ್ಚರಿಕೆಯ ಮಾಸ್ಕ್ ಧರಿಸದೇ ಇದ್ದದ್ದು ಮತ್ತು ವೈದಕೀಯ ವಿದ್ಯಾರ್ಥಿಗಳು ಎಂದು ಹೇಳಿದ ನಂತರ ಗ್ರಾಮಸ್ಥರ ಕೋಪ ನೆತ್ತಿಗೇರಿದ್ದು,ಸದ್ಯಕ್ಕೆ ಒಂದು ವಾರ್ನಿಂಗ್ ನೀಡಿ ವಾಪಸ್ ಕಳುಸಿದ್ದಾರೆ.

error: Content is protected !!