ಭರ್ಜರಿ ಪ್ರದರ್ಶನ ಕಂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

ಮಡಿಕೇರಿ: ಸುಂಟಿಕೊಪ್ಪದ ಗಣೇಶ್ ಚಿತ್ರಮಂದಿರದಲ್ಲಿ ತೆರೆಕಂಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಭರ್ಜರಿ ಪ್ರದರ್ಶನ ಕಂಡಿತು.
ಶಾಸಕ ಬೋಪಯ್ಯ ಅವರ ಸಹಕಾರದೊಂದಿಗೆ ಪ್ರತಿ ಪ್ರದರ್ಶನಕ್ಕೆ 250 ಜನರಿಗೆ ಚಲನಚಿತ್ರ ನೋಡಲು ಅವಕಾಶ ಕೊಟ್ಟಿದ್ದು, ಹೌಸ್ ಫುಲ್ ಆಗಿ ನಾಲ್ಕು ಪ್ರದರ್ಶನಗಳು ಸಹ ಯಶಸ್ವಿಯಾಯಿತು. ಹಿರಿಯ ನಾಗರಿಕರಿಗೆ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು.