fbpx

ಭರವಸೆಯ ನಟ ನಿರ್ಮಾಪಕ ದರ್ಶನ್ ರಾಘವಯ್ಯ ಮಿತ್ತೂರ್.

ಕಟ್ಟು ಮಸ್ತು ದೇಹದಾಢ್ಯತೆ, ಎತ್ತರದ ನಿಲುವು, ಖಡಕ್ ಲುಕ್ ಗಳಿರುವ ವ್ಯಕ್ತಿತ್ವದ ನಟ ದರ್ಶನ್ ರಾಘವಯ್ಯ. ಮೂಲತಃ ಕೊಡಗು ಜಿಲ್ಲೆಯ ಸಿದ್ಧಾಪುರದವರಾದ ಇವರು ನಟನೆಯಲ್ಲಿ ಅವಿರತ‌ ಶ್ರಮ ಪಡುತ್ತಿರುವರು.   ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ರಾಘವಯ್ಯ ಮಿತ್ತೂರ್ ಅವರು ನಟನೆಯ ಆಸಕ್ತಿ ಅಪಾರವಾಗಿ ಇದ್ದಿದ್ದರಿಂದ ಅಭಿನಯವನ್ನೇ ತಮ್ಮ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡರು. ಕುಶಾನ್ ಗೌಡ ಅವರ ಕನಸಿನ ಕೂಸಾದ ‘ನಾಕುಮುಖ’  ಸಿನಿಮಾದ ನಿರ್ಮಾಣ ಮಾಡಿದರು.

ನಿರ್ಮಾಣ ಮಾಡುವುದಷ್ಟೇ ಅಲ್ಲದೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕೂಡ ನಟಿಸಿದ್ದಾರೆ. ‘ನಾಕುಮುಖ’ ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಅದರಲ್ಲಿ ದರ್ಶನ್ ರಾಘವಯ್ಯ ಅವರು ನಿರ್ವಹಿಸಿದ ಪಾತ್ರ ಗಮನಾರ್ಹವಾಗಿದೆ. ಸಿನಿಮಾದ ಎಲ್ಲಾ ಕೆಲಸಗಳು ಮುಗಿಯುವ ಹಂತದಲ್ಲಿ ಇದೆ. 

ಸದ್ಯಕ್ಕೆ ‘ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ’ ಚಿತ್ರದ ನಿರ್ಮಾಣದಲ್ಲಿ ದರ್ಶನ್ ರಾಘವಯ್ಯ ಅವರು ಬಿಸಿಯಾಗಿದ್ದಾರೆ. ಅನಾಥ ಮಕ್ಕಳ ಜೀವನದ ಕಥೆ ಇರುವ ಈ ಚಿತ್ರಕ್ಕೆ ಬೆಂಗಳೂರಿನ ಸುನಿಲ್ ನಿರ್ದೇಶನ ಮಾಡುತ್ತಿದ್ದು, ಸುಮಂತ್ ಕ್ಯಾಮರಾಮನ್ ಆಗಿದ್ದಾರೆ. ಕೊಡಗಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ಈಗಾಗಲೇ ಭಾಗಶಃ ಪೂರ್ಣಗೊಂಡಿದ್ದು,

ಚಿತ್ರ ಉತ್ತಮವಾಗಿ ಮೂಡಿ ಬರುವ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ. ದರ್ಶನ್ ಅವರು ‘ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ’ ಸಿನಿಮಾದ ಮುಹೂರ್ತವು ಈ ಹಿಂದೆ ಮಡಿಕೇರಿಯ ಆಶ್ರಮವೊಂದರಲ್ಲಿ ವಿನೂತನವಾಗಿ ನಡೆದಿತ್ತು.   ಮುಂದಿನ ದಿನಗಳಲ್ಲಿ ದರ್ಶನ್ ರಾಘವಯ್ಯ ಅವರು ಯಶಸ್ವಿ ನಿರ್ಮಾಪಕ ಹಾಗು ನಟರಾಗಿ ಅನೇಕ ಸಿನಿಮಾಗಳನ್ನು ಮಾಡುವಂತಾಗಲಿ ಎಂದು ಅವರಿಗೆ ನಮ್ಮ ಸುದ್ದಿ ಸಂತೆ ತಂಡ ಶುಭ ಹಾರೈಸುತ್ತದೆ.

error: Content is protected !!