‘ಭರತನಾಟ್ಯವೆಂದರೆ ಜೀವ, ಸಂಗೀತ ಉಪಕರಣಗಳು ನನ್ನ ಉಸಿರು’

ಗೌರಿ ಹಬ್ಬ ವಿಶೇಷ
ಗಿರಿಧರ್ ಕೊಂಪುಳೀರಾ
ಇವತ್ತು ಹೆಂಗೆಳೆಯರಿಗೆ ವಿಶೇಷ ದಿನ, ಇಂತಹಾ ದಿನದಲ್ಲಿ ನಮ್ಮಲ್ಲಿರುವ ಪುಟ್ಟ ಗೌರಿಗಳು ನಿಮ್ಮ ಮುಂದೆ ಅನಾವರಣಗೊಳಿಸುವುದಕ್ಕೆ ನಿರ್ಧಾರ ಮಾಡಿದ್ದೇನೆ. ಹೀಗೆ ಯೋಚಿಸುತ್ತಿರುವಾಗ ಮೂರ್ತಿ ಪೂಜೆಗಿಂಥ ಅವರ ಕೀರ್ತಿ ಬಗ್ಗೆ ಬರೆಯುವ ಅಂತಾ ಇರುವಾಗ ಸಿಕ್ಕ ಒಬ್ಬ ಪುಟ್ಟ ಗೌರಿ ಸಕಲ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ರತಿಭೆ ಈ ಕೇಡನ ಪ್ರಗತಿ

ತನ್ನ ಸ್ವಂತ ಬುದ್ದಿಯಿಂದ ಏನನ್ನೋ ಮಾಡಲು ಹೊರಟವಳು, ಸ್ವಾವಲಂಭಿ ಜೀವನ ಅಂತಾರೆ ಅಲ್ವ ಹಾಗೆ. ಹೀಗೆ ತಾಯಿಯ ಪ್ರೋತ್ಸಾಹ, ತಂದೆಯ ಬೆಂಬಲದೊಂದಿಗೆ ಸಂಗೀತದಲ್ಲೇ ಸಾಧನೆ ಮಾಡಲು ಹೊರಟ ಪ್ರತಿಭೆ ಈಕೆ…
ಮಾಜಿ ಸೈನಿಕ ಕೇಡನ ಸೋಮಣ್ಣ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರಿಯಾಗಿರುವ ಈಕೆ ಚಿಕ್ಕಂದಿನಿಂದಲೂ ಸಂಗೀತ ಉಪಕರಣಗಳನ್ನು ಬಳಸುವುದು ಕರಗತ ಮಾಡಿಕೊಂಡಿದ್ದಾಳೆ.

ಐದು ವರ್ಷ ಇದ್ದಾಗಲೇ ಸಂಗೀತದ ಗೀಳು ಹತ್ತಿಸಿಕೊಂಡ ಪ್ರಗತಿಯನ್ನು ಕಾವೇರಿ ಕಲಾ ಪರಿಷತ್ ಗೆ ಸೇರ್ಪಡೆಗೊಂಡರು ಇಲ್ಲಿ ವಾಣಿ ಯಶ್ವಂತ್ ರವರ ಬಳಿ ಭರತನಾಟ್ಯ ಮತ್ತು ಸಂಗೀತ ಅಭ್ಯಾಸ ಮಾಡಿದ್ದಾರೆ.

ಭರತನಾಟ್ಯದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದ ಹಂತ ಮುಗಿಸಿದ್ದು ಕಾಲೇಜಿನ ನಂತರ ವಿದ್ವತ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ.ಇನ್ನು ಕೃಷ್ಣಗೋಪಾಲ್ ರವರ ಬಳಿ ಸಂಗೀತ ಕಲಿತರೆ ಹರೀಶ್ ಎಂಬುವವರ ಬಳಿ ಕೀಬೋರ್ಡ್ ಕಲಿತು ಗಿಟಾರ್ ನತ್ತ ಮುಖ ಮಾಡಿದರು.
ಕುಶಾಲನಗರದ ವಿವೇಕನಂದ ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿರುವ ಈಕೆ ಮನೆಯಲ್ಲೇ ಕೊಳಲು ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾಳೆ. ತಬಲ ಸಹಾ ಅಭ್ಯಾಸ ಮಾಡಿಕೊಂಡಿರುವ ಈಕೆ ಯೋಗ ಸಹ ಕಲಿತಿದ್ದಾಳೆ.

ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವ ಈಕೆ ಚಿತ್ರಕಲೆಯಲ್ಲಿ ಸೀನಿಯರ್ ಮುಗಿಸಿದ್ದಾಳೆ.. ಸಿನಿಮಾ ಹಾಡುಗಳ ಕರೋಕೆಗೆ ತನ್ನದೇ ಸಾಹಿತ್ಯ ಬರೆಯುವ ಪ್ರಯತ್ನ ಮಾಡುತ್ತಾಳೆ ಈ ಪುಟ್ಟ ಪೋರಿ. ಮಡಿಕೇರಿಯಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಯುವ ಪ್ರತಿಭೆ ಗೌರವಕ್ಕೆ ಪಾತ್ರಳಾಗಿದ್ದು ಸೇರಿದಂತೆ ಹಲವು ಪ್ರಶಸ್ತಿ ಗಳಿಸಿದ್ದಾಳೆ ಮುಂದೆ ವಾಯ್ಲಿನ್ ಮತ್ತು ಸಾಕ್ಸೋಫೋನ್ ಕಲಿಯುವ ಇರಾದೆಯಿದೆ, ಅಮ್ಮನ ಮಾರ್ಗದರ್ಶದಲ್ಲಿ ಈ ಕ್ಷೇತ್ರದಲ್ಲಿ ಮುಂದುವರೆಯುವ ಜೊತೆ ಅವಕಾಶ ಸಿಕ್ಕಿದ್ದಲ್ಲಿ ಅಪ್ಪನಂತೆ ಸೇನೆಗೆ ಸೇರುವುದಕ್ಕೂ ಸಿದ್ದ ಎನ್ನುತ್ತಾಳೆ.

ಮೂಲತಃ ಮಡಿಕೇರಿ ತಾಲ್ಲೂಕಿನ ತಾಳತಮನೆಯವರಾಗಿರುವ ಪ್ರಗತಿ ತಂದೆ ಸೋಮಣ್ಣ ಮಾಜಿ ಸೈನಿಕ, ತಾಯಿ ವಿಶಾಲಾಕ್ಷಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಕೆಯ ಸಹೋದರ ಅಕ್ಷಯ್ ಗೌಡ ಸಹಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇವರು ಸಹಾ ಉತ್ತಮ ಕ್ರೀಡಾಪಟು, ಮಿಮಿಕ್ರಿ ಕಲಾವಿದ, ಕೀಬೋರ್ಡ್ ಸಹ ನುಡಿಸುತ್ತಾರೆ.
ಸದ್ಯ ಕುಶಾಲನಗರ ಸಮೀಪದ ಮಾದಾಪಟ್ಟಣದಲ್ಲಿ ನೆಲೆಸಿರುವ ಈಕೆ ಕೊರೊನಾ ಹಿನ್ನಲೆಯಲ್ಲಿ ಅಕ್ಕಪಕ್ಕದ ಮಕ್ಕಳಿಗೆ ಯೋಗ ಮತ್ತು ಭರತನಾಟ್ಯ ಹೇಳಿಕೊಡುತ್ತಿದ್ದಾರೆ. ಇತ್ತೀಚೆಗೆ ಮಹಾಭಾರತ ಧಾರವಾಹಿಯ ಶೀರ್ಶಿಕೆ ಹಾಡಿಗೆ ಭರತನಾಟ್ಯ ಶೈಲಿಯಲ್ಲಿ ನೃತ್ಯ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಟ್ಟಿನಲ್ಲಿ ತನ್ನ ಹೆಸರಿನಲ್ಲೇ ಪ್ರಗತಿಯನ್ನು ಇಟ್ಟುಕೊಂಡಿರುವ ಈ ಪುಟ್ಟ ಗೌರಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎನ್ನುವುದು ನಮ್ಮ ಹಾರೈಕೆ.