fbpx

ಭಯೋತ್ಪಾದನೆ -ಮತಾಂತರ -ಲವ್ ಜಿಹಾದ್ ಹಾಗೂ ಗೋಹತ್ಯೆ ನಡೆಸುವ ದುಷ್ಕರ್ಮಿಗಳನ್ನು ಎದುರಿಸಲು ಹಿಂದು ಸಮಾಜ ಸನ್ನದ್ಧವಾಗಿರಬೇಕು: ಹಿ.ಜಾ.ವೇ ರಾಧಾಕೃಷ್ಣ ಅಡ್ಯಂತಾಯ ಕಲ್ಲಡ್ಕ ಹೇಳಿಕೆ

ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿ ತಮ್ಮ ಅಧಿಪತ್ಯ ಸ್ಥಾಪಿಸಲೆತ್ನಿಸುವ ಜಿಹಾದಿಗಳನ್ನು ಮಟ್ಟಹಾಕಿ ಸಮಾಜದಲ್ಲಿ ಶಾಂತಿ ನೆಲೆಸಲು ಜಾಗೃತ ಹಿಂದು ಸಮಾಜವನ್ನು ನಿರ್ಮಾಣ ಮಾಡಲು ಹಿಂದು ಜಾಗರಣ ವೇದಿಕೆ ಕಟಿಬದ್ಧವಾಗಿದ್ದು ಯಾವುದೇ ಸವಾಲುಗಳನ್ನು ಎದುರಿಸಲು ಹಿಂದು ಜಾಗರಣ ವೇದಿಕೆ ಶಕ್ತವಾಗಿದೆಯೆಂದು ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಶ್ರಿ ರಾಧಾಕೃಷ್ಣ ಅಡ್ಯಂತಾಯ ಕಲ್ಲಡ್ಕ ರವರು ಸ್ಪಷ್ಟಪಡಿಸಿದರು. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ಇಂದು ನಡೆದ ಹಿಂದು ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಡ್ಯಂತಾಯರು ಸನಾತನ ಹಿಂದು ಧರ್ಮವೂ ಬಹಳ ಪ್ರಾಚೀನ ಧರ್ಮವಾಗಿದ್ದು ಸದ್ವಿಚಾರಗಳನ್ನೇ ಸಮಾಜಕ್ಕೆ ಕಲಿಸುತ್ತಿದೆ.ಆದರೆ ಇತ್ತೀಚೆಗೆ ಹುಟ್ಟಿಕೊಂಡ ಒಂದೆರೆಡು ಧರ್ಮಗಳ ದುರುಳರು ಸಮಾಜದಲ್ಲಿ ತಮ್ಮ ಪಾರುಪತ್ಯಕ್ಕಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಆಮಿಷಗಳ ಮೂಲಕ ಮತಾಂತರ ಮಾಡುವ ದುಷ್ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು ಮತಾಂತರಗೊಂಡವರಿಗೂ ಅರಿವು ಮೂಡಿಸಿ ಮತ್ತೆ ವಾಪಾಸ್ಸ್ ಮಾತೃಧರ್ಮಕ್ಕೆ ಕರೆತರುವ ಕೆಲಸವೂ ನಡೆಯುತ್ತಿದೆ. ಸಿರಿಯಾ, ಅಪಘಾನಿಸ್ಥಾನ,ಜಮ್ಮುಕಾಶ್ಮೀರ,ಪಶ್ಚಿಮ ಬಂಗಾಳ….ಮುಂತಾದೆಡೆಗಳಲ್ಲಿ ಮುಸ್ಲೀಂ ಭಯೋತ್ಪಾಧಕ ಸಂಘಟನೆಗಳ ಮತಾಂಧರು ಶಸ್ತ್ರಸಜ್ಜಿತರಾಗಿ ಅಮಾಯಕರನ್ನು ಸಾರ್ವಜನಿಕವಾಗಿ ಕೊಲೆ ಮಾಡುತ್ತಾ ತಮ್ಮ ದುಷ್ಕೃತ್ಯಗಳನ್ನೂ ಚಿತ್ರೀಕರಿಸಿ ಮಾಧ್ಯಮಗಳಲ್ಲಿ ಹರಿದಾಡಿಸುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವ ಮೂಲಕ ಆ ಪ್ರದೇಶಗಳಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸುವ ಪ್ರಯತ್ನ ನಡೆಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಬಾಳಿ ಬದುಕಬೇಕಾದರೆ ದೇಶದ ಸಂವಿಧಾನವನ್ನು ಒಪ್ಪಿಕೊಳ್ಳುವುದೇ ಅಂತಿಮ ಆಯ್ಕೆಯಾಗಿದ್ದು ಷರಿಯತ್ ಕಾನೂನು ಹೇರುವ ಪ್ರಯತ್ನ ನಡೆದಲ್ಲಿ ಅದನ್ನು ಮಟ್ಟಹಾಕಲು ಹಿಂದು ಸಮಾಜ ಶಕ್ತವಾಗಿದೆಯೆಂದು ಅಡ್ಯಂತಾಯ ಎಚ್ಚರಿಕೆ ನೀಡಿದರು. ಹದಿಹರೆಯದ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆಂದು ಶಾಲಾ ಕಾಲೇಜುಗಳಿಗೆ ತೆರಳುತ್ತಿರುವ ಸಂದರ್ಭ ಅವರನ್ನೂ ಆಸೆ ಆಮಿಷ ತೋರಿಸಿ ಮಾದಕ ವ್ಯಸನಿಗಳನ್ನಾಗಿಸುತ್ತಾ ಮತ್ತು ತಮ್ಮ ಮೋಸದ ಬಲೆಗೆ ಬಿದ್ದ ಹೆಣ್ಣು ಮಕ್ಕಳನ್ನು ಮತಾಂತರಿಸಿ ತಮ್ಮ ಮತಾಂಧತೆಯನ್ನು ಅವರ ಮೆದುಳಲ್ಲಿ ತುಂಬಿ ಭಯೋತ್ಪಾದನಾ ಸಂಘಟನೆಗಳಲ್ಲಿ ಬಳಸಿಕೊಳ್ಳುತ್ತಿರುವ ಪ್ರಕರಣಗಳೂ ನಮ್ಮ ಕಣ್ಣಮುಂದೆಯೇ ನಡೆಯುತ್ತಿದ್ದು ಮನೆಗಳಲ್ಲಿ ಪೋಷಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಜಾಗರೂಕರಾಗಿದ್ದು ಹದಿಹರೆಯದ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತಾಗಬೇಕೆಂದು ಕಿವಿಮಾತು ಹೇಳಿದ ಅಡ್ಯಂತಾಯರು ಅಂತಹ ಯಾವುದೇ ಅಪಾಯದ ಸುಳಿವುಗಳಿದ್ದರೆ ಸಂಘಟನೆಯ ಗಮನಕ್ಕೆ ತರುವಂತೆಯೂ ಕಿವಿಮಾತು ಹೇಳಿದರು.ನಮ್ಮಿಂದ ಲಾಭ ಪಡೆದು ನಮ್ಮ ಸಮಾಜದ ಮೇಲೆಯೇ ಧಾಳಿ ನಡೆಸುವವರೊಂದಿಗೆ ಯಾವುದೇ ರೀತಿಯ ವ್ಯಾಪಾರ ವ್ಯವಹಾರ ನಡೆಸದೇ ಆರ್ಥಿಕ ಹೊಡೆತ ನೀಡುವ ಮೂಲಕ ಸುಲಭವಾಗಿ ತಿರುಗೇಟು ನೀಡುವಂತೆ ಅಡ್ಯಂತಾಯರು ಸಲಹೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಟಿ.ಉಲ್ಲಾಸ್ ರವರು ಇತ್ತೀಚೆಗೆ ಗರಗಂದೂರಿನಲ್ಲಿ ಮತಾಂಧ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ. ನ ದುರುಳರು ಹಿಂದು ಜಾಗರಣ ವೇದಿಕೆಯ ಮುಖಂಡರಾದ ಸುನಿಲ್ ರವರ ಕೊಲೆಯತ್ನ ನಡೆಸಿರುವುದನ್ನು ಉಗ್ರವಾಗಿ ಖಂಡಿಸುತ್ತಾ..ದುಷ್ಕೃತ್ಯದಲ್ಲಿ ಭಾಗಿಯಾಗಿರುವ ನೈಜ ಉಗ್ರವಾದಿ ಜಿಹಾದಿ ಮನಸ್ಥಿತಿಯ ಆರೋಪಿಗಳನ್ನು ಎಡೆಮುರಿ ಕಟ್ಟದೇ ಇದ್ದರೆ ಹಿಂದು ಜಾಗರಣ ವೇದಿಕೆ ಅನಿವಾರ್ಯವಾಗಿ ಘಟನೆ ನಡೆದ ಸ್ಥಳದಿಂದಲೇ ಹೋರಾಟ ಆರಂಭಿಸುವುದು ಅನಿವಾರ್ಯವೆಂದು ಎಚ್ಚರಿಕೆ ನೀಡಿದರು.ಘಟನೆ ಸಂಭವಿಸಿ 5 ನಿಮಿಷಕ್ಕೇ ಸ್ಥಳಕ್ಕಾಗಮಿಸಿದ ಪೋಲೀಸರಿಗೆ ಈ ತನಕವೂ ಒಬ್ಬನೇ ಒಬ್ಬ ಆರೋಪಿಗಳನ್ನು ಬಂಧಿಸಲಾಗದೇ ಇರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು ಪೋಲೀಸರು ಯಾರ ಒತ್ತಡಕ್ಕೆ ಮಣಿದಿದ್ದಾರೆಂಬುವುದು ಬಹಿರಂಗವಾಗಬೇಕೆಂದರು.ಕಾರ್ಯಕ್ರಮ ಆಯೋಜಿಸುವ ಸಂದರ್ಭ ನಮ್ಮ ಸಂಘಟನೆಯ ಕಾರ್ಯಕರ್ತರಿಗೆ ಹಲವು ಕಾನೂನುಗಳನ್ನು ತಿಳಿಹೇಳಿ ಅನುಮತಿ ನಿರಾಕರಿಸುವ ಪೋಲೀಸರು ಅಧಿಕಾರಿಗಳು ಮೈಕ್ ಬಳಕೆಯ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವ ಮೂಲಕ ಮೊದಲು ತಮ್ಮ ನೈತಿಕತೆ ತೋರಿ ನಂತರ ಕಾನೂನು ಅರಿವು ಮೂಡಿಸಲಿ ಎಂದು ತಿರುಗೇಟು ನೀಡಿದರು.ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಹಾಗೂ ಮಂಗಳೂರಿನ ಸಿಎಎ ಹೋರಾಟದ ಹೆಸರಿನಲ್ಲಿ ಇಸ್ಲಾಂ ಮೂಲಭೂತವಾದಿ ಮತಾಂಧ ಸಂಘಟನೆಗಳು ನಡೆಸಿರುವ ದುಷ್ಕೃತ್ಯವನ್ನು ಪೋಲೀಸರು ಸದಾ ನೆನಪಿಟ್ಟುಕೊಂಡೇ ಕಾನೂನು ಪಾಲನೆ ಮಾಡುವ ಪ್ರಯತ್ನ ಮಾಡಲಿಯೆಂದು ಪೋಲೀಸರಿಗೂ ಕಿವಿಮಾತು ಹೇಳಿದ ಕೆ.ಟಿ. ಉಲ್ಲಾಸ್ ಗೋಹತ್ಯೆ ತಡೆಗಟ್ಟುವ ಸಂಬಂಧ ಹಿಂದು ಜಾಗರಣ ವೇದಿಕೆ ಮತ್ತಷ್ಟು ಉಗ್ರ ಹೋರಾಟ ನಡೆಸಲಿದ್ದು ಸರಕಾರ ಸೂಕ್ತ ಕಠಿಣ ಕಾನೂನು ಜಾರಿಗೊಳಿಸುವ ಮೂಲಕ ಗೋಹತ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆಯೆಂದರು. ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಕ್ಕೇರ ಅಜಿತ್ , ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಮಹೇಶ್ , ಜಿಲ್ಲಾ ಪ್ರಚಾರ ಪ್ರಮುಖ್ ಕುಮಾರ್ ,ಜಿಲ್ಲಾ ಉಪಾಧ್ಯಕ್ಷರಾದ ಸುಭಾಸ್ , ತಾಲ್ಲೂಕು ಅಧ್ಯಕ್ಷರುಗಳಾದ ಉಮೇಶ್ , ಯೋಗೇಶ್ ಬೆಳ್ಯಪ್ಪ,ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ,ಅನಿಲ್ ಚೇತನ್ ,ಹರೀಶ್ ˌ ರಂಜನ್ ಗೌಡ ಸೇರಿದಂತೆ ನೂರಾರು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಾತೆಯರು ಹಿಂದು ಜನಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!