ಭಾ.ಜ.ಪ ಯುವ ಮೋರ್ಚಾದಿಂದ ಸ್ವಚ್ಛತಾ ಕಾರ್ಯಕ್ರಮ

ಬಿಜೆಪಿ ಯುವಮೋರ್ಚಾ ಕೊಡಗು ಜಿಲ್ಲೆ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಇಂದು ಮುಂಜಾನೆಯಿಂದ ಮಡಿಕೇರಿ (ಸಂಪಿಗೆ ಕಟ್ಟೆ ಬಳಿಯಿಂದ )ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು.
ಅಧಿಕ ಪ್ರಮಾಣದಲ್ಲಿ ದೊರೆತ ಪ್ಲಾಸ್ಟಿಕ್ ಹಾಗೂ ಬಾಟಲಿ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ದರ್ಶನ್ ಜೋಯಪ್ಪನವರು, ‘ಕೊಡಗಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಬಿಸಾಡಬಾರದು ಹಾಗೂ ಸ್ವಚ್ಚತೆಯನ್ನು ಕಾಪಾಡಬೇಕು ಹಾಗೂ ಸ್ಥಳೀಯರು ಇದಕ್ಕೆ ಸಹಕಾರ ನೀಡಬೇಕು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಚಂಗಪ್ಪ, ಯಶ್ವಿನ್ ಪ್ರಮುಖರಾದ ನವನೀತ್ ಪೊನ್ನೇಟಿ, ಜಯಣ್ಣ, ಗುಮ್ಮಟ್ಟಿರ ಚೆಂಗಪ್ಪ, ಹಿತೇಶ್ ಮುತ್ತಪ್ಪ , ಪ್ರೀತಮ್ , ಪದ್ಮನಾಭ, ವಿನಯ್ ಹಾಗೂ ಜಿಲ್ಲೆ ಮತ್ತು ಮಂಡಲ ಕಾರ್ಯಕರ್ತರು ಹಾಜರಿದ್ದರು.