ಬ್ರಿಟನ್ ನ ರೂಪಾಂತರ ವೈರಸ್ ಸೋಂಕು ಕೊಡಗು ಜಿಲ್ಲೆಯಲ್ಲಿ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

• ರಾಜ್ಯ ಸರ್ಕಾರದಿಂದ ಸ್ವೀಕೃತವಾದ ಪಟ್ಟಿಯ ಪ್ರಕಾರ ಕೊಡಗು ಜಿಲ್ಲೆಗೆ 20 ಜನ ಬ್ರಿಟನ್ ನಿಂದ ಹಿಂದಿರುಗಿರುತ್ತಾರೆ.

• ಇವರಲ್ಲಿ 15 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 12 ಜನರ ಪರೀಕ್ಷಾ ವರದಿಯು ನೆಗೆಟಿವ್ ಬಂದಿದ್ದು, 03 ಜನರ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ.

• ಉಳಿದ 05 ಜನರ ಪೈಕಿ 04 ಜನರು ಬೇರೆ ಬೇರೆ ಜಿಲ್ಲೆಗಳಲ್ಲಿದ್ದು, ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲೆಯ ಸರ್ವೇಕ್ಷಣಾಧಿಕಾರಿಯವರಿಗೆ ನೀಡಲಾಗಿದೆ.

• 01 ಪ್ರಕರಣ ಮಾತ್ರ ಇನ್ನೂ ಪತ್ತೆ ಹಚ್ಚುವ ಹಂತದಲ್ಲಿದ್ದು, ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದು, ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

• ಈವರೆಗೆ ಜಿಲ್ಲೆಯಲ್ಲಿ ಬ್ರಿಟನ್ ನ ರೂಪಾಂತರ ವೈರಸ್ ದೃಢಪಟ್ಟಿರುವುದಿಲ್ಲ. ಒಂದು ವೇಳೆ ದೃಢಪಟ್ಟರೂ ಪ್ರತ್ಯೇಕ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಿಕೊಳ್ಳಲಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

error: Content is protected !!