ಬ್ರಹ್ಮಗಿರಿ ಭೂಕುಸಿತ:ವಿಜ್ಞಾನಿಗಳಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

ಕೊಡಗು: ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಭೂಕುಸಿತ ಮತ್ತು ಪ್ರಧಾನ ಅರ್ಚಕ ನಾರಾಯಣಾಚಾರ್ ಕುಟುಂಬ ಸೇರಿದಂತೆ ಐವರ ಭೂಸಮಾಧಿ ಕುರಿತ ವರದಿ ತಯಾರಿಸಿರುವ ಜಿಲಾಜಿಕಲ್ ಸರ್ವೆ ಆಫ್ ಇಂಡಿಯಾ 16 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

2020,ಆಗಸ್ಟ್ 5 ರ ತಡರಾತ್ರಿ ನಡೆದ ಘಟನೆ ಬಳಿಕ ಆಗಸ್ಟ್ 16,17ಕ್ಕೆ ತಜ್ಞರು ಭೇಟಿ ನೀಡಿದ ಸಂದರ್ಭ ಈ ದುರಂತಕ್ಕೆ ಮಾನವ ಅಭಿವೃದ್ದಿ ಕೆಲಸಗಳು ಮೂಲಕಾರಣವಾಗಿದ್ದು ಅದರಲ್ಲೂ ಇಂಗುಗುಂಡಿ ನಿರ್ಮಾಣ,ರಸ್ತೆ ನಿರ್ಮಾಣ ಮೂಲ ಕಾರಣ ಎಂದು ಉಲ್ಲೇಖ ಮಾಡಿದ್ದು 2017ರಲ್ಲೇ ತಲಕಾವೇರಿ ಮೂಲ ಸ್ವರೂಪಕ್ಕೆ ಧಕ್ಕೆಯಾಗಿದ್ದು ಭೂ ಕುಸಿತದ ಬಗ್ಗೆ ಮುನ್ಸೂಚನೆ ಇತ್ತು ಎಂದು ವರದಿ ಸಲ್ಲಿಕೆಯಾಗಿದೆ.
ಆದರೆ ಈ ವರದಿಯನ್ನು ಪ್ರಶ್ನಿಸಿ ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.

error: Content is protected !!