fbpx

ಬೌಂಡರಿ ಗೆರೆ…

-ಯತಿನ್ ಚಪ್ಪೆರ, ಹವ್ಯಾಸಿ ಬರಹಗಾರರು

ಕ್ರಿಕೇಟ್ ಬಾಲ್ ಅಂದರೆ ಮೊದಲು ತಲೆಯಲ್ಲಿ ಯೋಚನೆ ಅಗುವುದು ಲೆದರ್ ಬಾಲ್ ಕ್ರಿಕೇಟ್, ಅಂತರಾಷ್ಟ್ರೀಯ ಪಂದ್ಯಗಳನ್ನು ನೋಡಿ ತಮ್ಮ ಬಾಲ್ಯದಲ್ಲಿ ಪ್ರತಿಯೊಬ್ಬ ಕ್ರಿಕೇಟ್ ಅಭಿಮಾನಿ ತನ್ನ ಮನಸ್ಸಿಗೆ ಇಷ್ಟ ಆಗುವ ಕ್ರಿಕೇಟ್ ಆಟಗಾರರನ್ನು ಪ್ರೇರಣೆ ಆಗಿ ತಮ್ಮ ಮನಸ್ಸಿನಲ್ಲಿ ಇಟ್ಟು ಅವರಿಗೆ ಗೌರವಾನ್ವಿತ ಸ್ಥಾನ ತುಂಬಿರುತ್ತಾರೆ. ಇಂತಹ ಒಬ್ಬ ಕ್ರಿಕೇಟ್ ಪ್ರೇಮಿಗಳಲ್ಲಿ ನಾನು ಒಬ್ಬ, ಬಾಲ್ಯದಿಂದಲೂ ಕ್ರಿಕೇಟ್ ಆಟವಾಡಿಕೊಂಡು ನಾನೂ, ನನ್ನ ಅಣ್ಣ‌ ಲೆಕ್ಕವಿಲ್ಲದಷ್ಟು ಟೆನಿಸ್‌ ಮತ್ತು ರಬ್ಬರ್ ಬಾಲ್ ಕ್ರಿಕೇಟ್ ಪಂದ್ಯಗಳನ್ನು ಆಡುತ್ತಿದ್ದೆವು ಅದರಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಅಣ್ಣ ಗೆಲ್ಲುತ್ತಿದನು, ನಾನು ಬರೀ ಸೋಲನ್ನು ಅನುಭವಿಸುತ್ತಿದ್ದೆ, ಟಿವಿಯಲ್ಲಿ ಯಾವುದೇ ಕ್ರಿಕೇಟ್ ಪಂದ್ಯ ಪ್ರಸಾರವಾಗುತ್ತಿದರು ಚಾಚು ತಪ್ಪದೇ ನೋಡುತ್ತಿದೆವು, ಟೆಸ್ಟ್ ಪಂದ್ಯವನ್ನು ಐದು ದಿನಗಳ ಕಾಲ ನೋಡಿ ಮನೆಯಲ್ಲಿ ಲೆಕ್ಕವಿಲ್ಲದಷ್ಟು ಸಲ ಬೈಗಳ ತಿಂದಿದ್ದು ಉಂಟು. ನಾನು ನಾಲ್ಕನೇ ತರಗತಿ. ಅಣ್ಣ ಆರನೇ ತರಗತಿ. ಶಾಲೆಯಲ್ಲಿ ಪಾಠಕ್ಕಿಂತ ಆಟದಲ್ಲಿ ಇಬ್ಬರಿಗೂ ಹೆಚ್ಚು ಆಸಕ್ತಿ. ಶಾಲೆಯಲ್ಲಿ ಏಳನೇ ತರಗತಿಯವರಿಗೆ ಲೆದರ್ ಬಾಲ್ ಕ್ರಿಕೇಟ್ ಟೂರ್ನಮೆಂಟ್ ಡೇರನ್ಸ್ ಕಪ್‌ ಬೇರೆ ಶಾಲೆಯವರೊಂದಿಗೆ ಪಂದ್ಯಗಳನ್ನು ಆಡಿಸುತ್ತಿದರು, ನಮ್ಮ ಶಾಲೆಯ ತರಗತಿಗಳಲ್ಲಿ ಇದ್ದದ್ದು ಅಷ್ಟೇ ಜನ. ಪಕ್ಕದ ತರಗತಿಯವರನ್ನು ಕರೆದುಕೊಂಡು ಆಟವಾಡಿಸುತ್ತಿದ್ದರು, ಆಗ ನನ್ನ ಅಣ್ಣನಿಗೆ ಅವಕಾಶ ಸಿಕ್ಕಿತ್ತು, ಅಣ್ಣ ಹೊಡಿಬಡಿ ಆಟಗಾರ. ಹೌದು ಆದರೆ ಲೆದರ್ ಬಾಲ್ ಕ್ರಿಕೇಟ್ ಆಟವಾಡಿ ಅಭ್ಯಾಸವಿರಲಿಲ್ಲ, ಅಣ್ಣ ಆಗ ಲೆದರ್ ಬ್ಯಾಟ್ ಹಾಗು ಬಾಲ್ ಅನ್ನು ಹಟಮಾಡಿ ತರಿಸಿಕೊಂಡಿದ್ದ, ಕಲಿಯುವಾಗ ನನ್ನ ಮೇಲೆ ಪ್ರಯೋಗ ಮಾಡುತ್ತಿದ್ದದ್ದು ಅವನ ವಾಡಿಕೆ, ನನಗೆ ಆ ಬ್ಯಾಟ್ ಎತ್ತಲು ಸ್ವಲ್ಪ ಕಷ್ಟವಾಗುತ್ತಿತ್ತು, ಬಾಲ್ ಎಸೆಯುವಾಗ ಹೆದರಿ ಓಡಿ ಹೋಗುತ್ತಿದ್ದೆ. ಶಾಲೆಯಲ್ಲಿ ಬರಿ ಒಂದು ಗಂಟೆ ಮಾತ್ರ ಪ್ರಾಕ್ಟೀಸ್. ಅದು ಟೂರ್ನಮೆಂಟ್ಗೆ ಒಂದು ವಾರ ಇರುವಾಗ. ನಮ್ಮ ಶಾಲೆಯ ಪಿ ಟಿ ಮೇಷ್ಟ್ರು ಯಾವ ಆಟವನ್ನು ಕೂಡ ಯಾರಿಗೂ ಹೇಗೆ ಆಡಬೇಕೆಂದು ಹೇಳಿಕೊಡಲು ಮೈದಾನಕ್ಕೆ ಬಂದವರಲ್ಲ…! ಕಂಪ್ಯೂಟರ್ ಲ್ಯಾಬ್ ನಲ್ಲಿ ಕಂಪ್ಯೂಟರ್ ಟೀಚರ್ ರೊಂದಿಗೆ ಬಹಳ ಗಾಢವಾಗಿ ಮಾತನಾಡುತ್ತಿದ್ದರು…! ಆದ್ದರಿಂದ ನಮ್ಮ ಆಟಕ್ಕೆ ನಾವೇ ಹೊಣೆ, ಅಣ್ಣ ಎರಡೂ ವರ್ಷ‌ ಪಂದ್ಯಗಳನ್ನು ಚೆನ್ನಾಗಿ ಆಟವಾಡಿ ಸ್ಪೋರ್ಟ್ಸ್ ಹಾಸ್ಟೆಲ್ ಸೇರಿಕೊಂಡ.‌ ನಾನು ಆರನೇ ತರಗತಿ. ಚೆನ್ನಾಗಿ ಆಡುವವರಿಗೆ ಏಳನೇ ತರಗತಿಯವರೊಂದಿಗೆ ಟೂರ್ನಮೆಂಟ್ ನಲ್ಲಿ ಆಡಲು ಅವಕಾಶ..! ನನಗೂ ಸ್ವಲ್ಪ ಅಣ್ಣನೊಂದಿಗೆ ಆಟವಾಡಿ ಅಭ್ಯಾಸ ಇರುವುದರಿಂದ ಚೆನ್ನಾಗಿ ಆಡುತ್ತಿದ್ದೆ. ಆದರೆ ಹೇಳಿ ಕೊಡಲು ಅಣ್ಣ ಇಲ್ಲ, ಬೇರೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರಿಂದ ನಾನು ಒಬ್ಬಂಟಿ ಆದೆ. ಆ ವರ್ಷವು ಅದೇ ಕಥೆ ಒಂದು ವಾರ ಇರುವಾಗ ಅಭ್ಯಾಸ ಪಂದ್ಯ ಹೇಳಿಕೊಡಲು ಯಾರು ಇಲ್ಲ, ಪಿ ಟಿ ಮೇಷ್ಟ್ರು… ಅದೇ ಕಂಪ್ಯೂಟರ್ ಲ್ಯಾಬ್, ಅದೇ ಟೀಚರ್, ಸೀನಿಯರ್ ಅಂಡರ್ ಆಡುವ ಪಂದ್ಯದಲ್ಲಿ ಅವರು ಹೇಳಿದ ಹಾಗೆ ನಾವು ಕೇಳಬೇಕು ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿ ಎರಡನೇ ಪಂದ್ಯದಲ್ಲಿ ನಮ್ಮ ತಂಡ ಗೆಲ್ಲಲು 135 ರನ್ನು 15 ಒವರ್ ನಲ್ಲಿ ಬೇಕಿತ್ತು, ಗೆದ್ದರೆ ಸೆಮಿಫೈನಲ್ಸ್. 70/9 ವಿಕೆಟ್ ಪತನವಾಗಿತ್ತು. ನಮ್ಮ ತಂಡದ 10ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಗಾಬರಿಗೊಂಡಿದ್ದ. ನನಗೆ ಬಾಲ್ ಬಡಿದು ಸ್ಟಂಪ್ ಹಾರಿದ್ದು ಎಲ್ಲವೂ ಕ್ಷಣ ಮಾತ್ರದಲ್ಲಿ ನಡೆದು ಹೋಗಿತ್ತು, ಸೀನಿಯರ್ಸ್ ಬಾಯಿಗೆ ಬಂದಂತೆ ತೆಗಳಿದರು. ವರ್ಷದ ಕನಸು ಮಣ್ಣಾಗಿತ್ತು, ಮನಸ್ಸಿನಲ್ಲಿ ಬೇಸರ, ತರಗತಿಯಲ್ಲಿ ಬರೀ ಪಂದ್ಯದ ಯೋಚನೆಯಲ್ಲಿ ವರ್ಷ ಉರುಳಿದ್ದೇ ಗೊತ್ತಾಗಲಿಲ್ಲ. ಮುಂದಿನ ವರ್ಷದ ಪಂದ್ಯದ ಮೇಲೆ ಭರವಸೆ. ಗೆಲ್ಲಬೇಕು ಎಂದು ಪಂದ್ಯಗಳನ್ನು ಟಿವಿಯಲ್ಲಿ ನೋಡಲು ಆರಂಭಿಸಿದೆ. ಆಗ ನನ್ನ ಕಣ್ಣಿಗೆ ಬಿದದ್ದು ‘ದಿ ವಾಲ್’ ರಾಹುಲ್ ದ್ರಾವಿಡ್. ಅವರ ಟೆಸ್ಟ್ ಆಟವನ್ನು ನೋಡುತ್ತಿದ್ದ ನನಗೆ ಮೊದಲು ಬೇಸರವಾಗುತ್ತಿತ್ತು ನೋಡು ನೋಡುತ್ತಾ ಅವರು ಆಡುವ ಶೈಲಿ ಮನಸ್ಸಿಗೆ ಹಿಡಿಸಲು ಆರಂಭಿಸಿತ್ತು ಅವರ ಆಟದ ವೈಖರಿ ನೋಡಿ ರಾಹುಲ್‌ ದ್ರಾವಿಡ್‌ ಅವರ ಅಭಿಮಾನಿಗಳಲ್ಲಿ ನಾನು ಒಬ್ಬನಾಗಿದ್ದೆ. ಟೂರ್ನಮೆಂಟ್ ಶುರುವಾಗಲು ಒಂದು ವಾರ ಇರುವಾಗ ಅಭ್ಯಾಸ ಪಂದ್ಯ ಆಡಲು ಶುರು, ಧೂಳು ಹಿಡಿದಿದ್ದ ಕ್ರಿಕೇಟ್ ಕಿಟ್ ಅನ್ನು ಧರಿಸಿ ದಿನಕ್ಕೆ ಒಂದು ಗಂಟೆ ಅಭ್ಯಾಸ ಪಂದ್ಯ, ಆ ವರ್ಷವು ಅದೇ ಮಾಸ್ಟರ್, ಅದೇ ಲ್ಯಾಬ್, ಅದೇ ಕಂಪ್ಯೂಟರ್ ಟೀಚರ್ …
ಅ ವರ್ಷ ಕ್ಯಾಪ್ಟನ್ ಆಗಿ ನಾನು ಆಯ್ಕೆ ಆದೆ, ಆ ವರ್ಷ ಎರಡು ಪಂದ್ಯ ಗೆದ್ದು ಸೆಮಿಫೈನಲ್ಸ್ ಗೆ ಲಗ್ಗೆ ಇಟ್ಟೆವು, ಅದು ನಾನು ಮರೆಯಲಾಗದ ರೋಮಾಂಚನಕಾರಿ ಪಂದ್ಯ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಲು ನಮ್ಮ ಪಿ ಟಿ ಮಾಸ್ಟರ್ ಆಜ್ಞೆ ಮಾಡಿದ್ದರು. ಅದೇ ರೀತಿ ನಾನು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದೆ, 10 ಓವರಿನ ಪಂದ್ಯ ಅದಾಗಿತ್ತು. ಮೊದಲು ಬ್ಯಾಟಿಂಗ್ ಮಾಡಲು ಪಿ ಟಿ ಮಾಸ್ಟರ್‌ ಇಬ್ಬರನ್ನು ಕಳಸಿದ್ದು 2 ಓವರ್ 9ರನ್, 2 ವಿಕೇಟ್‌ ಪತನ. ಇನಿಬ್ಬರನ್ನು ಆಡಲು ಕಳಿಸಿದರು 4 ಓವರ್, 20/4 ವಿಕೇಟ್‌ ಪತನ 5ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ನನ್ನನ್ನು ಕಳುಹಿಸಿದರು. ಕೊನೆಯ ಅಲ್ ರೌಂಡರ್ ನಾನು. ಮಿಕ್ಕಿ ದವರು ಎಲ್ಲಾ ಬೌಲಸ್೯ಗಳೇ. ಮೈದಾನಕ್ಕೆ ಕಾಲಿಟ್ಟ ಕೂಡಲೇ ಹಳೆಯ ನೆನಪು ಕಾಡತೊಡಗಿತು. ಮೊದಲ ಎಸೆತ ಮುಖದ ಹತ್ತಿರ ದಾಟಿದ ರಭಸದ ಒತ್ತಡಕ್ಕೆ ಸಿಲುಕಿ ಸ್ಪಲ್ಪ ಹೆದರಿಕೆ ಆಯಿತು, ಇನ್ನೊಂದು ಎಸೆತ ಎಡ ಕಾಲಿನ ಪ್ಯಾಡ್ ಮೇಲೆ ಬಿತ್ತು, ಮೂರನೇ ಎಸೆತ ಬಂದು ಎದೆಯ ಕೆಳಭಾಗಕ್ಕೆ ಬಂದು ಬಡಿಯಿತು. ಕೆಳಗೆ ಉರುಳಿ ಬಿದ್ದೆ , ಮಾಸ್ಟರ್ ಗಳು ಪೇಯ್ನ್ ರಿಲೀಫ್ ಸ್ಪ್ರೇ ಮಾಡುತ್ತಿದ್ದರು. ಎದ್ದ ಕೂಡಲೇ ‘ Can you play..! ಎಂದು ಕೇಳಿದರು ನಾನು ತಲೆ ಆಡಿಸಿ ‘yes I can’ ಎಂದು ಉತ್ತರಿಸಿದೆ…
ಒಂದೊಂದು ಎಸೆತವನ್ನು ಸೂಕ್ಷ್ಮವಾಗಿ ಗಮನಿಸಿ ಆಡಬೇಕೆಂದು ನಿರ್ಧರಿಸಿ ಬಂದ ಬಾಲ್ ಗಳಿಗೆ ಬ್ಯಾಟ್ ಮುಟ್ಟಿಸಿ ದಿಕ್ಕು ತೋರಿಸಲು ಶುರುಮಾಡಿದೆ..ಒಂದು ಕಡೆ ಬೌಲರ್‌ಗಳು ಹೆಚ್ಚು ಬ್ಯಾಟಿಂಗ್ ಮಾಡಲು ಸೂಕ್ತ ಅಲ್ಲ ಆದುದರಿಂದಲೇ ಹೆಚ್ಚಿನ ಚೆಂಡನ್ನು ನಾನೇ ಎದುರಿಸಬೇಕಾಯಿತು 10 ಓವರ್ ಮುಕ್ತಾಯಕ್ಕೆ 74/9.
ನನ್ನ ವಯಕ್ತಿಕ 41 ರನ್ ಕಲೆ ಹಾಕಿದ್ದೆ ಎದುರಾಳಿ ತಂಡಕ್ಕೆ ಗೆಲ್ಲಲು 75ರನ್ ಬೇಕಿತ್ತು. ಬ್ಯಾಟಿಂಗ್ ಶುರುಮಾಡಿದ ಎದುರಾಳಿ ತಂಡ ಬಲಿಷ್ಠ ತಂಡವಾಗಿದ್ದು ತಮ್ಮ ಆಟವನ್ನು ಆಡಿ ಕೊನೆಯ ಓವರ್ ಬಾಕಿಯಿರುವಂತೆ 70/5 ವಿಕೇಟ್‌ ಪತನವಾಗಿ ಕೊನೆಯ ಓವರಿನಲ್ಲಿ ಗೆಲ್ಲಲು 5 ರನ್ ಬೇಕಿರುವುದರಿಂದ ಓವರ್ ಮಾಡಿ ಮುಗಿಸು ಎಂದು‌ ನನ್ನ ಕೈಗೆ ಬಾಲ್ ಎಸೆದರು, ಕಾರಣ ಒಂದು ಓವರ್ ಗೆ 5 ರನ್ ಮಾತ್ರ ಬೇಕಿತ್ತು, ನಾನು ಬೌಲಿಂಗ್ ಮಾಡಿ ಒಂದು ವೈಡ್, ಎರಡು ಸಿಂಗಲ್, ಒಂದು ವಿಕೇಟ್‌ ತೆಗೆದು, ಒಂದು ಡಾಟ್ ಬಾಲ್ ಹಾಕಿ, ಕೊನೆಯ ಎಸೆತಕ್ಕೆ ಎದುರಾಳಿ ತಂಡಕ್ಕೆ ಗೆಲ್ಲಲು ಎರಡು ರನ್ನು ಬೇಕಿತ್ತು, ಕೊನೆಯ ಎಸೆತವನ್ನು ಬ್ಯಾಟ್ ನಿಂದ ಬಾಲ್ಗೆ ಕುಟ್ಟಿ ಓಡಿದರು, ಆಫ್ ಸೈಡ್ ಅಂಡರ್ ದಿ ಸರ್ಕಲ್‌ ಫೀಲ್ಡರ್ ಚೆಂಡನ್ನು ಗಾಬರಿಯಿಂದ ರಭಸವಾಗಿ ಕೀಪರ್ ನತ್ತ ಎಸೆದ. ಕೀಪರ್ ನಿಂದ ಕೆಲವು ಅಂತರದ ದೂರದಿಂದ ಚೆಂಡು ಹಾರಿ ಬೌಂಡರಿ ಗೆರೆ ದಾಟಿತ್ತು, ಅಲ್ಲಿಗೆ ಕಪ್ ಗೆಲ್ಲುವ ಭರವಸೆ ನುಚ್ಚು ನೂರಾಗಿ ಹೋಗಿತ್ತು…ಬೇಸರದಲ್ಲಿ ಮರದ ಕೆಳಗೆ ಕುಳಿತಿದ್ದ ನನ್ನನ್ನು ‘ Well played young man’ ಎಂದು ಪಂದ್ಯ ವೀಕ್ಷಿಸಿದ ಹಿರಿಯರು ಬಂದು ಬೆನ್ನು ತಟ್ಟಿದರು..! ನಿನ್ನ ಆಟವನ್ನು ನಾಜುಕಾಗಿ ಆಟವಾಡಿದಿಯ ಎಲ್ಲಿಯೂ ನೀನು ತಾಳ್ಮೆ ಕಳೆದುಕೊಳ್ಳಲಿಲ್ಲ ಕೊನೆಯವರೆಗು ಹೋರಾಡಿ ಧೈರ್ಯದಿಂದ ತಂಡವನ್ನು ಮುನ್ನಡೆಸಿದ್ದು, ನಿನ್ನ ಅಭ್ಯಾಸ ಹೀಗೆ ಮುಂದುವರೆಯಲಿ….!
ಎಂದು ತಮ್ಮ ದಾರಿಯಲ್ಲಿ ಸಾಗಿದರು…..

ಚಪ್ಪೆರ_ಯತೀನ್🖋
error: Content is protected !!