fbpx

ಬೈಕ್ -ಕೋವಿ ಕಳವು: ಆರೋಪಿ ಬಂಧನ

ಎರಡು ಬೈಕ್ ಮತ್ತು ಡಬಲ್ ಬ್ಯಾರಲ್ ಕೋವಿ ಕಳವು ಮಾಡಿ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾ‌ಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಕ್ಕಬ್ಬೆ ಗ್ರಾಮ್ ಕೆ.ಸಿ.ಅಶೋಕ್ ಎಂಬವರೇ ಬಂಧಿತ ಆರೋಪಿಯಾಗಿದ್ದಾನೆ. ಈತ ವೀರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ಎರಡು ಬೈಕ್ ಮತ್ತು ಕುಶಾಲನಗರ ತಾಲೂಕಿನ ಅಭ್ಯತ್ ಮಂಗಲ ಗ್ರಾಮದಿಂದ ಎರಡು ನಳಿಕೆ (ಡಬಲ್ ಬ್ಯಾರಲ್ ) ಕೋವಿಯನ್ನು ಕಳ್ಳತನ ಮಾಡಿರುವ ಆರೋಪ ಎದುರಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಭಾನುವಾರ ಕೂಡಿಗೆ ಸೇತುವೆ ಬಳಿ ಬೈಕ್ ನಲ್ಲಿ ಬರುತ್ತಿದ್ದ ಆರೋಪಿಯನ್ನು ತಡೆದು ಪರಿಶೀಲಿಸಿದಾಗ ಕಳವು ಮಾಡಿದ ಬೈಕ್ ಹಾಗೂ ಕೋವಿ ಪತ್ತೆಯಾಗಿದೆ.

ಈ ಆರೋಪಿಯು ಕಳೆದ 15 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಂದಿದ್ದು, ತಕ್ಷಣದಿಂದಲೇ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿರುವುದಾಗಿ ಹೇಳಲಾಗಿದೆ.

ಈತ ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಮನೆ ಕಳ್ಳತನ ಮಾಡಲು ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ.
ಈಗಾಗಲೇ ಪೊಲೀಸರು ಈತನಿಂದ 1ಲಕ್ಷ ಮೌಲ್ಯ ದ ಕೋವಿ ಮತ್ತು 52 ಸಾವಿರ ಬೆಲೆ ಬಾಳುವ ಹೀರೋ ಹೊಂಡಾ ಬೈಕ್, 20 ಸಾವಿರ ಬೆಲೆಯ ಟಿವಿಎಸ್ ಬೈಕ್ ನ್ನು ವಶಪಡಿಸಿಕೊಂಡಿರುತ್ತಾರೆ.
ಡಿವೈಎಸ್ಪಿ ಶೈಲೇಂದ್ರ ಅವರ ಸೂಚನೆಯಂತೆ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ಡಿ ಸಿ ಐ ಬಿ ಪೊಲೀಸರು ಮತ್ತು ಕುಶಾಲನಗರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

error: Content is protected !!